ನೆಲ್ಯಾಡಿ: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ(ನಿ) ವಾರ್ಷಿಕ ಸಭೆ; ರೂ.3,76,401 ನಿವ್ವಳ ಲಾಭ

ಶೇರ್ ಮಾಡಿ

ಪ್ರತಿ ಲೀಟರಿಗೆ 0.39 ಪೈಸೆ ಬೋನಸ್ ಹಾಗೂ ಶೇ.8 ಡಿವಿಡೆಂಟ್ ಘೋಷಿಸಿದ – ಆಶಾ ಎಸ್ ಜೋಗಿತ್ತಾಯ

ನೆಲ್ಯಾಡಿ: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ(ನಿ) ವಾರ್ಷಿಕ ಸಭೆಯು ಸೆ.08 ರಂದು ಸಂಘದ ಅಧ್ಯಕ್ಷೆ ಆಶಾ ಎಸ್ ಜೋಗಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.

ಸಂಘದಲ್ಲಿ ಒಟ್ಟು 240 ಸದಸ್ಯರಿದ್ದು, ಇದರಲ್ಲಿ 200 ಜನ ಹಾಲು ಹಾಕುವ ಸದಸ್ಯರಿರುತ್ತಾರೆ, ಹಾಲು ವ್ಯಾಪಾರ, ಪಶು ಆಹಾರ ವ್ಯಾಪಾರ ಹಾಗೂ ಇನ್ನಿತರ ಆದಾಯ ಸೇರಿ ಒಟ್ಟು ರೂ.11,74,894 ಲಾಭಗಳಿಸಿದ್ದು. ಇದರಲ್ಲಿ ಆಡಳಿತ ವೆಚ್ಚ ಮತ್ತು ನೂತನವಾಗಿ ಆರಂಭಗೊಂಡ ಸಾಂದ್ರ ಶಿತಲೀಕರಣದ ಖರ್ಚು ಹಾಗೂ ಸವಕಳಿಗಳನ್ನು ಕಳೆದು ರೂ.3,76,401 ನಿವ್ವಳ ಲಾಭಗಳಿಸಿರುತ್ತದೆ. ಸಂಘದ ಕಾರ್ಯದರ್ಶಿ ಶ್ರೀಮತಿ ಕಮಲ ಅವರು ವರದಿಯಲ್ಲಿ ತಿಳಿಸಿದರು.

ಸಂಘದ ಅಧ್ಯಕ್ಷೆ ಆಶಾ ಎಸ್ ಜೋಗಿತ್ತಾಯ ಅವರು ಸಂಘದ ಸದಸ್ಯರಿಗೆ ಪ್ರತಿ ಲೀಟರಿಗೆ 0.39 ಪೈಸೆ ಬೋನಸ್ ಹಾಗೂ ಶೇ.8 ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.

ಪ್ರೋತ್ಸಾಹ:
2022 -23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಹಾಗೂ ಅತಿ ಹೆಚ್ಚು ಹಾಲು ಪೂರೈಸಿದ ಮೂವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ಉಪವ್ಯವಸ್ಥಾಪಕರಾದ ಡಾ.ಸತೀಶ್, ಸಂಘದ ವಿಸ್ತರಣಾಧಿಕಾರಿ ಆದಿತ್ಯ, ಡಾ.ಸಚಿನ್ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಅನಸೂಯ ಸ್ವಾಗತಿಸಿ, ನಿರ್ದೇಶಕಿ ಗಾಯತ್ರಿ.ಜಿ ಪ್ರಾರ್ಥಿಸಿದರು. ಹೇಮಾವತಿ.ಜೆ ವಂದಿಸಿದರು.

ಸಂಘದ ಸಹಾಯಕರಾದ ಗೀತಾ, ರಂಜಿತಾ ಹಾಗೂ ಬಿಎಂಸಿ ನಿರ್ವಾಹಕ ಮನೋಜ್ ಕುಮಾರ್, ಆಡಳಿತ ಮಂಡಳಿ ಸದಸ್ಯರು ಸಹಕರಿಸಿದರು.

Leave a Reply

error: Content is protected !!