ನೆಲ್ಯಾಡಿ ಜೇಸಿಐ: ಜೇಸಿ ಸಪ್ತಾಹ ಉದ್ಘಾಟನೆ

ಶೇರ್ ಮಾಡಿ

ನೆಲ್ಯಾಡಿ ಜೇಸಿಐ ನ ಜೇಸಿ ಸಪ್ತಾಹದ ಉದ್ಘಾಟನಾ ಸಮಾರಂಭವು ನೆಲ್ಯಾಡಿ ಕಲ್ಪವೃಕ್ಷ ಸಹಕಾರಿ ಸೌದದಲ್ಲಿ ಸೆ.9ರಂದು ನಡೆಯಿತು.

ಉದ್ಘಾಟನೆಯನ್ನು ಶಾಂತಿನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾಗಿರುವ ಪ್ರತಾಪ್ ಚಂದ್ರ ರೈ ಅವರು ನೆರವೇರಿಸಿ, ಜೇಸಿಐ ಸಂಸ್ಥೆಯು ಒಂದು ಉತ್ತಮ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುತ್ತದೆ, ಹಲವಾರು ಯುವಕರಿಗೆ ದಾರಿ ದೀಪವಾಗಿರುತ್ತದೆ, ಈ ಸಂಸ್ಥೆಯು ನೆಲ್ಯಾಡಿ ಪರಿಸರದಲ್ಲಿ ಹಲವಾರು ಉತ್ತಮ ಸಮಾಜಮುಖಿ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಪ್ರಶಂಶೀಯವಾಗಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕ್ರೀಡಾಪಟು ಆಗಿರುವ ಪ್ರಮೋದ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಜೇಸಿಯಿಂದ ಹಲವಾರು ಯುವಕರು ತಮ್ಮ ವ್ಯಕ್ತಿತ್ವವನ್ನು ನಿರ್ಮಿಸುವಲ್ಲಿ ಈ ಸಂಸ್ಥೆಯು ಸಹಕಾರಿಯಾಗಿದೆ ಮತ್ತು ನಾನು ಜೇಸಿ ಸದಸ್ಯನಾಗಿ ಸಂಘಟನೆಯಲ್ಲಿ ಕೆಲಸ ಮಾಡಿರುವ ಅನುಭವವಿರುತ್ತದೆ, ನನ್ನ ಜೀವನಕ್ಕೂ ಪ್ರೇರೇಪಣೆಯಾಗಿರುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಮಹಾಬಲ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಪದಾಧಿಕಾರಿ ಹಾಗೂ ನೆಲ್ಯಾಡಿ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿರುವ ನಿತ್ಯಾನಂದ ಶೆಟ್ಟಿ ಮನವಳ್ಳಿಗೆ ಗುತ್ತು, ಜಿಲ್ಲಾ ಬಂಟರ ಸಂಘದ ಸದಸ್ಯೆ ಯಾಗಿರುವ ಶ್ರೀಮತಿ ವಾಣಿ ಸುಂದರ ಶೆಟ್ಟಿ ಹಾಗೂ ಜೇಸಿಐ ನ ಪೂರ್ವ ವಲಯ ಅಧಿಕಾರಿ ಜೇಸಿ.ಪ್ರಶಾಂತ್ ಸಿ.ಎಚ್, ಜೇಸಿರೇಟ್ ಅಧ್ಯಕ್ಷ ರಶ್ಮಾದಯಾಕರ್ ರೈ, ಜೇಸಿ ಸಪ್ತಾಹದ ಯೋಜನಾ ನಿರ್ದೇಶಕರಾಗಿರುವ ಜೇಸಿ ಜಯಾನಂದ ಬಂಟ್ರಿಯಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಮತಿ ಸುಚಿತ್ರ ಜಯಾನಂದ ಬಂಟ್ರಿಯಲ್ ವಂದಿಸಿದರು.

Leave a Reply

error: Content is protected !!