90 ಲಕ್ಷ ರೂ. ಮೌಲ್ಯದ ಅಂಬರ್ ಗ್ರೀಸ್ ಸಹಿತ ಮೂವರ ಬಂಧನ

ಶೇರ್ ಮಾಡಿ

ಮಂಗಳೂರು: ಪಣಂಬೂರು ಬೀಚ್ ಬಳಿ ಸೋಮವಾರ ದಾಳಿ ನಡೆಸಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೂವರ ವಶದಿಂದ 90 ಲಕ್ಷ ರೂ. ಮೌಲ್ಯದ 900 ಗ್ರಾಂ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಉಡುಪಿ ಜಿಲ್ಲೆ ಸಾಲಿಗ್ರಾಮದ ಜಯಕರ (39) ಶಿವಮೊಗ್ಗ ಸಾಗರದ ಆದಿತ್ಯ (25) ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವ್ ನ ಲೋಹಿತ್ ಕುಮಾರ್ ಗುರಪ್ಪನವರ್ (39) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಅಪರಾಧ ವಿಭಾಗದ ಅಧಿಕಾರಿಗಳು ಮತ್ತು ಸಿಬಂದಿಗಳು ದಾಳಿಯನ್ನು ನಡೆಸಿದ್ದಾರೆ.

ಅಂಬರ್ ಗ್ರೀಸ್ ಅಪರೂಪದ ವನ್ಯಜೀವಿ ಉತ್ಪನ್ನವಾಗಿದ್ದು ಅದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಮೌಲ್ಯ ಹೊಂದಿದೆ.

Leave a Reply

error: Content is protected !!