ಭಾರತ ಮತ್ತು ಪಾಕಿಸ್ಥಾನ; ಚೆಂಡು ತಗುಲಿ ಬ್ಯಾಟ್ಸ್ ಮ್ಯಾನ್ ಸಲ್ಮಾನ್ ಮುಖದಿಂದ ಸುರಿದ ರಕ್ತ! ;Video

ಶೇರ್ ಮಾಡಿ

ಭಾರತ ಮತ್ತು ಪಾಕಿಸ್ಥಾನ ನಡುವಿನ ಏಷ್ಯಾಕಪ್ ಸೂಪರ್ ಫೋರ್ ಹಣಾಹಣಿಯಲ್ಲಿ ಚೆಂಡು ತಗುಲಿ ಪಾಕಿಸ್ಥಾನ ಬ್ಯಾಟ್ಸ್ ಮ್ಯಾನ್ ಆಘಾ ಸಲ್ಮಾನ್ ಅವರ ಮುಖದಿಂದ ರಕ್ತ ಸುರಿದಿದೆ.

ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಎಸೆದ 21 ನೇ ಓವರ್ ನಲ್ಲಿ ಆಘಾ ಸಲ್ಮಾನ್ ಗೆ ಸಲ್ಮಾನ್ ಅವರು ಚೆಂಡನ್ನು ಬಾರಿಸಲು ಮುಂದಾದಾಗ ಚೆಂಡು ಮುಖಕ್ಕೆ, ಬಲ ಕಣ್ಣಿನ ಕೆಳಗೆ ಬಡಿದಿದೆ. ಈ ವೇಳೆ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಚೆಂಡು ತಗುಲಿದ ತತ್ ಕ್ಷಣವೇ ರಕ್ತಸ್ರಾವ ಪ್ರಾರಂಭವಾಯಿತು.

ಈ ವೇಳೆ ಕೀಪಿಂಗ್ ಮಾಡುತ್ತಿದ್ದ ಕೆ.ಎಲ್.ರಾಹುಲ್ ಸೇರಿ ಭಾರತದ ಆಟಗಾರರು ಏನಾಯಿತು ಎಂದು ಧಾವಿಸಿ ಬಂದರು. ಪಾಕ್ ತಂಡದ ಸದಸ್ಯರು ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಲ್ಮೆಟ್ ಧರಿಸಿ ಆಟ ಮುಂದುವರಿಸಿದರು. 23 ರನ್ ಗಳಿಸಿದ್ದ ವೇಳೆ ಕುಲದೀಪ್ ಯಾದವ್ ಅವರು ಸಲ್ಮಾನ್ ರನ್ನು ಎಲ್ಬಿಡಬ್ಲ್ಯೂ ಮಾಡಿದರು.

357 ರನ್ ಗಳ ಸವಾಲು ಪಡೆದಿರುವ ಪಾಕಿಸ್ಥಾನದ ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳು ಭಾರತದ ಬಿಗು ಬೌಲಿಂಗ್ ವ್ಯೂಹ ದೊಳಗೆ ಸಿಲುಕಿ ನಲುಗಿದರು. 24 ಓವರ್ ಗಳ ಒಳಗೆ 96 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.

9 ರನ್ ಗಳಿಸಿದ್ದ ವೇಳೆ ಇಮಾಮ್-ಉಲ್-ಹಕ್ ಅವರನ್ನು ಬುಮ್ರಾ ಔಟ್ ಮಾಡಿದರು. ಬುಮ್ರಾ ಎಸೆದ ಚೆಂಡು ಹಕ್ ಬ್ಯಾಟ್ ಗೆ ತಗುಲಿ ಶುಭ್ ಮನ್ ಗಿಲ್ ಅವರ ಕೈಸೇರಿತು. 10 ರನ್ ಗಳಿಸಿದ್ದ ನಾಯಕ ಬಾಬರ್ ಆಜಂ ಅವರನ್ನು ಹಾರ್ದಿಕ್ ಪಾಂಡ್ಯ ಬೌಲ್ಡ್ ಮಾಡಿ ಶಾಕ್ ನೀಡಿದರು. 27 ರನ್ ಗಳಿಸಿದ್ದ ಫಖರ್ ಜಮಾನ್ ಅವರನ್ನು ಕುಲದೀಪ್ ಯಾದವ್ ಬೌಲ್ಡ್ ಮಾಡಿದರು. ಮೊಹಮ್ಮದ್ ರಿಜ್ವಾನ್ 2 ರನ್ ಗಳಿಗೆ ನಿರ್ಗಮಿಸಿದರು.ಶಾರ್ದೂಲ್ ಠಾಕೂರ್ ಎಸೆದ ಚೆಂಡನ್ನು ರಾಹುಲ್ ಕೈಗಿತ್ತು ಪೆವಿಲಿಯನ್ ಕಡೆಗೆ ಮರಳಿದರು.

Leave a Reply

error: Content is protected !!