ಹತ್ತೇ ಸೆಕೆಂಡ್‌ನಲ್ಲಿ ಲಕ್ಷಾಧಿಪತಿಯಾದ ಯುವಕ – ಬರಿಗೈಲಿ ಬಂದವನಿಗೆ ಸಿಕ್ಕಿದ್ದು ಬರೋಬ್ಬರಿ 94 ಲಕ್ಷ ಹಣ…!!

ಶೇರ್ ಮಾಡಿ

ಬರಿಗೈಯಲ್ಲಿ ಅಂಗಡಿಯೊಂದಕ್ಕೆ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ರೂ. ಇದ್ದ ಹಣದ ಬ್ಯಾಗ್ ಸಿಕ್ಕಿದ್ದು, ಹತ್ತೇ ಸೆಕೆಂಡ್‌ನಲ್ಲಿ ಲಕ್ಷಾಧಿಪತಿಯಾದ ಘಟನೆ ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ನಡೆದಿದೆ.

ಪ್ರಮೋದ್ ಎಂಬಾತ ಸೈಟ್ ಖರೀದಿಸುವ ಸಲುವಾಗಿ 94 ಲಕ್ಷ ರೂ. ಕೂಡಿಸಿಟ್ಟಿದ್ದ. ಈತ ಚಂದ್ರಲೇಔಟ್ ನಿವಾಸಿಯಾಗಿದ್ದು, ಹಣವನ್ನು ಎಣಿಸಲು ಸ್ನೇಹಿತನ ಅಂಗಡಿಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದ. ಅಲ್ಲದೇ ವಕೀಲರ ಕಚೇರಿಗೆ ತೆರಳಲು ರೆಡಿಯಾಗಿದ್ದ. ಬಾಕ್ಸ್‌ನಲ್ಲಿ ಹಣವನ್ನು ಹಾಕಿಕೊಂಡು ಮನೆಯಿಂದ ಹೊರಟ ಪ್ರಮೋದ್ ಮನೆ ಕೆಳಗೆ ಬಂದು ಕಾರಿನ ಡೋರ್ ತೆಗೆಯಲೆಂದು ಕೈಯಲ್ಲಿದ್ದ ಹಣದ ಬ್ಯಾಗ್ ಅನ್ನು ಪಕ್ಕದಲ್ಲೇ ಇದ್ದ ಅಪರಿಚಿತ ಆ್ಯಕ್ಟಿವಾ ಸ್ಕೂಟಿ ಮೇಲೆ ಇರಿಸಿದ್ದಾನೆ. ಬಳಿಕ ದಾಖಲೆಗಳಿದ್ದ ಬ್ಯಾಗ್ ಅನ್ನು ಮಾತ್ರ ಕಾರಿನಲ್ಲಿ ಹಾಕಿಕೊಂಡು ಹಣದ ಬ್ಯಾಗ್ ಅನ್ನು ಮರೆತು ಹೋಗಿದ್ದಾನೆ.

ಬೈಕ್ ಮಾಲೀಕ ವರುಣ್ ಗೌಡ ಬೈಕ್ ಬಳಿ ಬಂದು ನೋಡಿದಾಗ ಬ್ಯಾಗ್ ಕಾಣಿಸಿದ್ದು, ಓಪನ್ ಮಾಡಿ ನೋಡಿದಾಗ ಹಣದ ಕಂತೆ ಕಂಡಿದೆ. ವರುಣ್ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಣದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಶ್ರೀನಗರದಲ್ಲಿರುವ ಮನೆಯಲ್ಲಿ ಹಣವನ್ನು ಹಾಗೆ ಇಟ್ಟುಕೊಂಡಿದ್ದ ವರುಣ್ 94 ಲಕ್ಷ ರೂ. ಹಣ ಏನು ಮಾಡಬೇಕು ಎನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದ.

ವರುಣ್ ಈ ಹಣದಿಂದ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಗೂ ಪ್ಲಾನ್ ಮಾಡಿಕೊಂಡಿದ್ದ. ಆದರೆ ಎಲ್ಲಿಯೂ ಹಣ ಕೊಡದೇ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ಇತ್ತ ಸ್ನೇಹಿತನ ಅಂಗಡಿ ಬಳಿ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್‌ಗೆ ಹಣ ಇಲ್ಲದೇ ಇರುವುದನ್ನು ಕಂಡು ಶಾಕ್ ಆಗಿದೆ. ಬಳಿಕ ಪ್ರಮೋದ್ ಮನೆಯ ಬಳಿ ವಾಪಸ್ ಬಂದು ನೋಡಿದಾಗ ಬೈಕ್, ಹಣ ಎರಡೂ ಇರಲಿಲ್ಲ.

ಹಣ ಕಳೆದುಕೊಂಡ ಪ್ರಮೋದ್ ಚಂದ್ರಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಹೊರಟ ಮಾರ್ಗದಲ್ಲಿರುವ 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಕೊನೆಗೂ ಆರೋಪಿಯನ್ನು ಸೆರೆ ಹಿಡಿದು 94 ಲಕ್ಷ ರೂ. ಹಣವನ್ನು ರಿಕವರಿ ಮಾಡಿದ್ದಾರೆ. ವರುಣ್ ತಾನಾಗಿಯೇ ಆ ಹಣ ತಂದು ಪೊಲೀಸರಿಗೆ ಕೊಟ್ಟಿದ್ದರೆ ಹೀರೋ ಆಗುತ್ತಿದ್ದ. ಆದರೆ ಮನೆಯಲ್ಲಿ ಹಣ ಇಟ್ಟುಕೊಂಡು ಈಗ ಆರೋಪಿಯಾಗಿದ್ದಾನೆ.

Leave a Reply

error: Content is protected !!