ಚೈತ್ರಾ ಗುರಿ ಮಾಡಿ ಯಾರೋ ದುಡ್ಡು ತಿಂದಿದ್ದಾರೆ: ತಾಯಿ ರೋಹಿಣಿ

ಶೇರ್ ಮಾಡಿ

ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಆದರೆ ಚೈತ್ರಾಳನ್ನು ಯಾರೋ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಅವಳನ್ನು ಗುರಿ ಮಾಡಿಕೊಂಡು ಯಾರೋ ದುಡ್ಡು ತಿಂದಿದ್ದಾರೆ ಎಂದು ಆಕೆಯ ತಾಯಿ ರೋಹಿಣಿ ಹೇಳಿಕೆ ನೀಡಿದ್ದಾರೆ.

ಚೈತ್ರಾ ನಮ್ಮ ಜೊತೆ ಬಹಳ ಪ್ರೀತಿಯಿಂದ ಇದ್ದಳು. ಅವಳು ಮೊದಲಿನಿಂದಲೂ ಚುರುಕಿನ ಸ್ವಭಾವದವಳು. ಮೊನ್ನೆ ಫೋನ್ ಮಾಡಿ ನಮ್ಮ ಜೊತೆ ಮಾತಾಡಿದ್ದಳು. ನಮಗೆ ಧೈರ್ಯದಿಂದ ಇರುವಂತೆ ತಿಳಿಸಿದ್ದಳು ಎಂದು ಹೇಳಿದ್ದಾರೆ.

ಚೈತ್ರಾಳನ್ನು ಗುರಿ ಮಾಡಿಕೊಂಡು ಯಾರೋ ದುಡ್ಡು ತಿಂದಿದ್ದಾರೆ. ಅವಳು ಯಾವ ಟೆನ್ಶನ್‌ನಲ್ಲಿ ಇದ್ದರೂ ನಮಗೆ ಹೇಳುವುದಿಲ್ಲ ಎಂದು ಚೈತ್ರಾ ತಾಯಿ ರೋಹಿಣಿ ತಿಳಿಸಿದ್ದಾರೆ.

Leave a Reply

error: Content is protected !!