ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ ಸೋನು ಗೌಡ..!!

ಶೇರ್ ಮಾಡಿ

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳ ಮಹಾಪುರವೇ ಹರಿದು ಬರುತ್ತಿವೆ. ಇಂತಹ ಕಾಮೆಂಟ್ ಗಳಿಗೆ ಉತ್ತರ ಕೊಡುವಂತೆ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಅವರು ಹಳದಿ ಸೀರೆ ತೊಟ್ಟಿದ್ದಾರೆ.

ನಮ್ಮ ನೋಡುವ ಕಣ್ಣುಗಳು ಹೇಗಿರುತ್ತವೋ ಹಾಗೆ ಜನರು ಕಾಣುತ್ತಾರೆ ಎನ್ನುವುದು ಲೋಕರೂಢಿ. ಅದನ್ನು ಹೇಳುವ ರೀತಿಯಲ್ಲಿ ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಳದಿ ತೆಳುವಾದ ಸೀರೆಯಲ್ಲಿ ಮತ್ತೆ ಹಾಟ್ ಹಾಟ್ ಆಗಿ ಸೋನು ಕಾಣಿಸಿಕೊಂಡಿದ್ದು, ನೀವು ಏನೇ ಕಾಮೆಂಟ್ ಬರೆದರೂ ನಾನು ಇರುವುದೇ ಹೀಗೆ ಎಂದು ಸಾರಿದ್ದಾರೆ.

ಈ ಹಿಂದೆಯೂ ಅವರು ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡಿದ್ದರು. ಆ ವಿವರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದ ನಟಿ ಬಿಕಿನಿ ಫೋಟೋ ಕೂಡ ಶೇರ್ ಮಾಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು.

ಕಪ್ಪು ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದರು. ವಿವಿಧ ಭಂಗಿಗಳ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು. ಸೋನು ಅವತಾರಕ್ಕೆ ಒಂದಿಷ್ಟು ಜನ ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.

ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.

ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯ ಅಯ್ಯರ್ ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್‌ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ.

Leave a Reply

error: Content is protected !!