ನೆಲ್ಯಾಡಿ: ಬೆಥನಿ ಐಟಿಐಯಲ್ಲಿ ಅಭಿಯಂತರರ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ: ಸತತ ಪರಿಶ್ರಮ, ದುಡಿಮೆ, ಸಮರ್ಪಣೆ ಹಾಗೂ ಧ್ಯೇಯದ ಕಡೆಗೆ ಬದ್ಧತೆ, ಸೇವೆ ಮೂಲಕ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂಬುದು ಸರ್ ಎಮ್ ವಿಶ್ವೇಶ್ವರಯ್ಯನವರು ಅವರ ಜೀವನದಲ್ಲಿ ಅಳವಡಿಸಿ ನಡೆದು ತೋರಿಸಿದರು, ಆ ಮೂಲಕ ಹೊಸ ಸಮಾಜದಿಂದ ರಾಷ್ಟ್ರ ನಿರ್ಮಾಣ ಆಗಬೇಕಿದೆ ಎಂದು ಐಟಿಐ ಪ್ರಾಧ್ಯಾಪಕರಾದ ಸುಬ್ರಾಯ ನಾಯಕ್, ಪುಣಚ ಇವರು ಅಭಿಯಂತರರ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ರೆ. ಫಾ. ಜೈಸನ್ ಸೈಮನ್ ಓ ಐ ಸಿ ವಹಿಸಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್, ಜಾನ್ ಪಿ. ಎಸ್, ವರ್ಗೀಸ್ ಎನ್ ಟಿ ಉಪಸ್ಥಿತರಿದ್ದರು.
ಶಿವಾನಂದ ಸ್ವಾಗತಿಸಿ, ಅನಂತ ಕೃಷ್ಣ ವಂದಿಸಿದರು. ಹರಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!