ರೋಗಿಯ ಹೊಟ್ಟೆಯಲ್ಲಿತ್ತು ನಟ್, ಬೋಲ್ಟ್ ಸೇರಿ 15 ಕ್ಕೂ ಹೆಚ್ಚು ವಸ್ತುಗಳು..!!

ಶೇರ್ ಮಾಡಿ

ಹೊಟ್ಟೆ ನೋವೆಂದು ವೈದ್ಯರ ಬಳಿಗೆ ಹೋದ ರೋಗಿಯನ್ನು ಪರೀಕ್ಷಿಸಿದ ವೈದ್ಯರೇ ಒಮ್ಮೆ ದಂಗಾದ ಘಟನೆ ಪಂಜಾಬ್ ನ ಮೊಗಾ ಪಟ್ಟಣದಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ ಸಾಕಷ್ಟು ಮದ್ದು ಮಾಡಿದರೂ ಯಾವುದೇ ಮದ್ದು ಈ ವ್ಯಕ್ತಿಯ ಹೊಟ್ಟೆನೋವು ಕಡಿಮೆ ಮಾಡಲಿಲ್ಲ ಇದರಿಂದ ಬೇಸತ್ತ ವ್ಯಕ್ತಿ ಮೊಗದಲ್ಲಿರುವ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ, ವೈದ್ಯರ ಬಳಿ ತನಗೆ ತೀವ್ರ ಹೊಟ್ಟೆ ನೋವು ಆಗುತ್ತಿರುವ ವಿಚಾರ ವೈದ್ಯರ ಬಳಿ ಹೇಳಿಕೊಂಡಿದ್ದಾರೆ.

ವ್ಯಕ್ತಿಯ ಮಾತನ್ನು ಕೇಳಿದ ವೈದ್ಯರು ಹೊಟ್ಟೆಯ ಎಕ್ಸ್-ರೇ ಮಾಡಲು ಮುಂದಾಗಿದ್ದಾರೆ ಅದರಂತೆ ಹೊಟ್ಟೆಯ ಎಕ್ಸ್-ರೇ ಮಾಡಿದ್ದಾರೆ ಕೆಲ ಹೊತ್ತಿನ ಬಳಿಕ ಎಕ್ಸ್-ರೇ ರಿಪೋರ್ಟ್ ಬಂದಿದೆ ಇದನ್ನು ನೋಡಿದ ವೈದ್ಯರು ಬೆಚ್ಚಿ ಬಿದ್ದಿದ್ದಾರೆ.. ಎಕ್ಸ್-ರೇ ವರದಿಯ ಪ್ರಕಾರ ವ್ಯಕ್ತಿಯ ಹೊಟ್ಟೆಯಲ್ಲಿ ಇಯರ್ ಫೋನ್, ನಟ್, ಬೋಲ್ಟ್, ಬೀಗ, ಕೀ ಸೇರಿದಂತೆ 15ರಿಂದ 20 ವಸ್ತುಗಳು ಹೊಟ್ಟೆಯಲ್ಲಿ ಇರುವುದು ಪತ್ತೆಯಾಗಿದೆ.

ಕೊಡಲೇ ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಿದ ವೈದ್ಯರ ತಂಡ ಸುಮಾರು ಮೂರು ಗಂಟೆಗಳ ಸತತ ಪ್ರಯತ್ನದ ಮೂಲಕ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಸ್ತ್ರ ಚಿಕಿತ್ಸೆ ಬಳಿಕ ಪ್ರತಿಕ್ರಿಯೆ ನೀಡಿದ ಮೆಡಿಸಿಟಿ ನಿರ್ದೇಶಕ ಡಾ ಅಜ್ಮೀರ್ ಕಲ್ರಾ ಅವರು ತಮ್ಮ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ, ಇದುವರೆಗೂ ಈ ರೀತಿಯ ಪ್ರಕರಣ ನಾನು ಕೈಗೆತ್ತಿಕೊಳ್ಳಲಿಲ್ಲ ಇದು ನನ್ನ ಜೀವಮಾನದಲ್ಲಿ ನೋಡಿದ ಮೊದಲ ಪ್ರಕರಣವೆಂದು ಹೇಳಿಕೊಂಡಿದ್ದಾರೆ.

ಇಷ್ಟೊಂದು ವಸ್ತುಗಳು ವ್ಯಕ್ತಿಯ ಹೊಟ್ಟೆಯೊಳಗೆ ಸೇರಿದ್ದರಿಂದ ನಿರಂತರ ಹೊಟ್ಟೆನೋವು ಕಾಣಿಸಿಕೊಂಡಿದೆ ಆದರೆ ಶಸ್ತ್ರ ಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಎಲ್ಲ ವಸ್ತುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕುಟುಂಬ ಸದಸ್ಯರು ಕಳೆದ ಕೆಲ ಸಮಯದಿಂದ ವ್ಯಕ್ತಿ ಹೊಟ್ಟೆನೋವಿನಿಂದ ರಾತ್ರಿ ನಿದ್ರಿಸುತ್ತಿರಲಿಲ್ಲ ಹೊಟ್ಟೆನೋವು ಜಾಸ್ತಿಯಾಗುತ್ತಿದ್ದಂತೆ ಆಸ್ಪತ್ರೆಗೆ ದಾವಿಸಿರುವುದಾಗಿ ಹೇಳಿದ್ದಾರೆ, ಆದರೆ ಇದೆಲ್ಲದರ ನಡುವೆ ವ್ಯಕ್ತಿಯ ಹೊಟ್ಟೆಯಲ್ಲಿ ಅಷ್ಟೊಂದು ವಸ್ತುಗಳು ಹೇಗೆ ಹೋಗಿವೆ ಎಂಬುದೇ ಕುಟುಂಬ ಸದಸ್ಯರಿಗೂ ವೈದ್ಯರಿಗೂ ಕಾಡಿದ ಪ್ರಶ್ನೆಯಾಗಿದೆ.

Leave a Reply

error: Content is protected !!
%d