ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮದಾಟ, ಖಾಸಗಿ ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾ.ಪಂ.ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅರೆಸ್ಟ್…!!

ಶೇರ್ ಮಾಡಿ

ಬಣ್ಣದ ಮಾತಿನಿಂದ ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಖಾಸಗಿ ಲಾಡ್ಜ್ ಒಂದರಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಸೆರೆಹಿಡಿದು ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಕಾರವಾರ ಪೋಲಿಸರು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ಸಂಗೀತದಲ್ಲಿ ಆಸಕ್ತಿ ಉಳ್ಳವಳಾಗಿದ್ದು, ಕ್ಲಬ್ ಹೌಸ್ ಅ್ಯಪ್‌ನಲ್ಲಿ ಹಾಡುತ್ತಿದ್ದಳು. 2020 ರಲ್ಲಿ ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈಕೆಗೆ ಆರೋಪಿಯ ಪರಿಚಯವಾಗಿ ಪ್ರಶಾಂತ ಭಟ್ ಮಾಣಿಲ(35.ವ) ಆರೋಪಿಯ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ, 2023ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಶಿರಸಿ ದೇವಸ್ಥಾನದಲ್ಲಿ ಭೇಟಿಯಾಗಿ ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದ. ಈ ಲಾಡ್ಜ್‌ನಲ್ಲೇ ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ.

ಇದಾದ ನಂತರ 2023 ರ ಫೆಬ್ರುವರಿಯಲ್ಲೂ ಮತ್ತೆ ಅದೇ ಶಿರಸಿಯ ಖಾಸಗಿ ಲಾಡ್ಜ್‌ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಘಟನೆಯ ವೇಳೆ ಆರೋಪಿ ದೂರುದಾರಳೊಂದಿಗೆ ಫೋಟೋಗಳನ್ನು ತೆಗೆದುಕೊಂಡಿದ್ದ. ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯಗಳನ್ನೂ ಸೆರೆ ಹಿಡಿದಿದ್ದಾನೆ.

ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಬಳಿಕ ಆರೋಪಿಯು ಪ್ರತಿ ದಿನ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ನನ್ನ ನಿನ್ನ ಇಬ್ಬರ ಫೋಟೋ ಹಾಗೂ ನಿನ್ನ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ನಿನ್ನ ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದು, ಇದಾದ ಬಳಿಕ ಮಹಿಳೆಯಲ್ಲಿ ಹಣಕ್ಕೂ ಬೇಡಿಕೆ ಇಟ್ಟು ಒಮ್ಮೆ 25 ಸಾವಿರ ರೂ. ಪಡೆದಿದ್ದಾನೆ. ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಗಳಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೇ, ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದ. ಮಹಿಳೆ ಹಾಗೂ ಆಕೆಯ ಪತಿಯ ದೂರಿನ ಹಿನ್ನೆಲೆ ಕಾರವಾರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.

Leave a Reply

error: Content is protected !!
%d