ಬಿಟ್ಟೋಗ್ಬೇಡಾ… ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ..!!

ಶೇರ್ ಮಾಡಿ

ಪ್ರಾಣಿಗಳು ಮಾನವನ ಜತೆ ಉತ್ತಮ ಬಾಂಧವ್ಯ ಹೊಂದಿರುವ ಘಟನೆ ಬಗ್ಗೆ ಓದಿರುತ್ತೀರಿ. ಅದೇ ರೀತಿ ತನ್ನ ಪ್ರೀತಿಯ ಮಾವುತ ಮತ್ತು ಆನೆಯ ನಡುವಿನ ಬಾಂಧವ್ಯದ ಕುರಿತು ಸೆರೆಯಾದ ಈ ವೈರಲ್‌ ವಿಡಿಯೋದ ಎಲ್ಲರ ಹೃದಯವನ್ನು ಗೆದ್ದಿದೆ.

ವೈರಲ್‌ ವಿಡಿಯೋದಲ್ಲಿ ಮಾವುತ ಬೈಕ್‌ ಏರಿ ಹೊರಡಲು ಸಿದ್ಧವಾಗುತ್ತಿದ್ದಂತೆಯೇ ಆನೆ ಓಡಿ ಬಂದು ತನ್ನ ಸೊಂಡಿಲಿನಿಂದ ಆತನನ್ನು ಮುದ್ದಾಡಿ ಬಿಟ್ಟು ಹೋಗದಂತೆ ತಡೆಯುತ್ತದೆ. ಕೊನೆಗೆ ಮಾವುತ ಬೈಕ್‌ ನಿಂದ ಕೆಳಗಿಳಿದಾಗ ಆನೆ ಮಾವುತನನ್ನು ಸೊಂಡಿಲಿನಿಂದ ಬಿಗಿದಪ್ಪಿಕೊಳ್ಳುತ್ತದೆ. ಮಾವುತ ಕೂಡಾ ಅದನ್ನು ಪ್ರೀತಿಯಿಂದ ಮೈದಡವಿ, ಸಂತೈಸುತ್ತಾನೆ. ಹಿಂದೆ-ಮುಂದೆ ಓಡಾಡಿ ಆನೆ ಸಂತಸ ವ್ಯಕ್ತಪಡಿಸುತ್ತದೆ.

ಏತನ್ಮಧ್ಯೆ ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್‌ ಏರಿ ಕುಳಿತುಕೊಳ್ಳುತ್ತಾನೆ. ತಕ್ಷಣವೇ ಓಡಿಬಂದ ಆನೆಮಾವುತನನ್ನು ತಡೆದು, ಆತನನ್ನು ಬೈಕ್‌ ನಿಂದ ಹಿಂದಕ್ಕೆ ಸರಿಸುವ ವಿಡಿಯೋ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.

ಈ ವಿಡಿಯೋವನ್ನು ಐಆರ್‌ ಎಎಸ್ ಅಧಿಕಾರಿ ಅನಂತ್‌ ರುಪಾನ್ಗುಡಿ ಅವರು ಎಕ್ಸ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದು, ಇದು ಆನೆ ಮತ್ತು ಮಾವುತನ ನಡುವಿನ ಬಾಂಧವ್ಯ ಎಂದು ಕ್ಯಾಪ್ಶನ್‌ ನೀಡಿದ್ದರು. ವಿಡಿಯೋಕ್ಕೆ ನೂರಾರು ಮಂದಿ ಕಮೆಂಟ್‌ ವ್ಯಕ್ತಪಡಿಸಿದ್ದಾರೆ. ನೋಡಿ ಆನೆ ಎಷ್ಟು ಸೌಮ್ಯವಾಗಿ ವರ್ತಿಸುತ್ತಿದೆ. ತಾನು ಬಲಿಷ್ಠ ಎಂದು ಗೊತ್ತಿದ್ದರೂ ಕೂಡಾ ಮಾವುತನ ಬಗೆಗಿನ ಅದರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
%d