ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಸೆ.29ರ ಶುಕ್ರವಾರ ನಡೆದಿದೆ.
ನಗರದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ ಡಾ.ಸಿಂದುಜ (28) ಅನುಮಾಸ್ಪದವಾಗಿ ಮನೆಯಲ್ಲಿ ಸಾವನಪ್ಪಿದ್ದಾರೆ.
ಸಿಂದುಜಗೆ ಜನವರಿ ತಿಂಗಳಲ್ಲಿ ಚೆನೈ ವ್ಯಕ್ತಿಯೊಂದಿಗೆ ವಿವಾಹಕ್ಕೆ ಸಿದ್ದತೆಯಾಗಿತ್ತು. ವೈದ್ಯೆ ಸಿಂದುಜ ಎಂದಿನಂತೆ ಸರ್ಕಾರಿ ಆಸ್ಪತ್ರಗೆ ಬರಬೇಕಾದವರು ಬರದೇ ಇದ್ದಾಗ ಅನುಮಾನಗೊಂಡು ಆಸ್ಪತ್ರೆಯವರು ಆಕೆಯ ಮನೆಯ ಕಿಟಕಿಯಲ್ಲಿ ನೋಡಿದಾಗ ಸತ್ತು ಬಿದ್ದಿರುವುದು ಕಂಡು ಗಾಬರಿಗೊಂಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಮೃತ ವೈದ್ಯರ ಪೋಷಕರು ಚೆನೈನಿಂದ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.