ಕಡಬದ ಮರ್ದಾಳ ಸಮೀಪ ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ನಂತರ ತುಳಿತಕ್ಕೊಳಗಾದ ನೇಲ್ಯಡ್ಕ ನಿವಾಸಿ ಚೋಮ ರವರ ಮನೆಗೆ ಸುಳ್ಯ ಶಾಸಕಿರವರು ಭೇಟಿ ನೀಡಿದರು.
ಮನೆಯಲ್ಲಿ ಚೋಮ ರವರ ಪತ್ನಿಯ ಜೊತೆ ಮಾತನಾಡಿ ಧೈರ್ಯ ತುಂಬಿದರು. ಸರ್ಕಾರದಿಂದ ಸಿಗುವ ಸೌಲಭ್ಯ ನೀಡುವುದಾಗಿ ಹೇಳಿದರು. ಸ್ಥಳೀಯರ ಬೇಡಿಕೆಯಾದ ಅರಣ್ಯದಂಚಿನ ರಸ್ತೆ ಬದಿಗೆ ಸೋಲಾರ್ ದೀಪ, ರಸ್ತೆ ಬದಿ ಇರುವ ಪೊದೆಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ನಂತರ ಅಧಿಕಾರಿಗಳೊಂದಿದೆ ಚರ್ಚಿಸಿ ಗಾಯಗೊಂಡ ಚೋಮರವರ ಚಿಕಿತ್ಸೆ ವೆಚ್ಚವನ್ನು ಇಲಾಖೆಯಿಂದಲೇ ಬರಿಸುವಂತೆ ಹಾಗೂ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ವಿಮಲ್ ಬಾಬು ಆರ್, ಉಪ ವಲಯ ಅರಣ್ಯಧಿಕಾರಿ ಯೋಗೀಶ್ ಜಿ ಸಿ, ಗಸ್ತು ಅರಣ್ಯ ಪಾಲಕರು ಪ್ರಕಾಶ್, ಐತ್ತೂರು ಗ್ರಾಮ ಪಂ ಅಧ್ಯಕ್ಷರಾದ ವತ್ಸಲಾ ಜೆ, ಸದಸ್ಯರಾದ ಉಷಾ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಮನೋಹರ್ ರೈ, ನಾರಾಯಣ ಶೆಟ್ಟಿ ಅತ್ಯಡ್ಕ, ಹರೀಶ್ ಬಂಟ್ರ, ಗಂಗಾಧರ ರೈ, ತಮ್ಮಯ್ಯ ಗೌಡ, ಭಾಗೀರಥಿ, ಕೆ.ಟಿ ಪಿಲಿಪ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.