ಕರ್ನಾಟಕ ಅಥ್ಲೆಟಿಕ್ ಫೆಡರೇಶನ್ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಡಬ ಸರಕಾರಿ ಪ್ರೌಢಶಾಲೆಯ ಚರಿಷ್ಮಾ 16 ವರ್ಷ ವಯೋಮಿತಿಯೊಳಗಿನ 2000ಮೀ ಓಟದಲ್ಲಿ ನೂತನ ದಾಖಲೆಯೊಂದಿಗೆ -(6.51 ನಿಮಿಷ ) ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ(ಹಳೆಯ ದಾಖಲೆ 2010 ರಲ್ಲಿ ಸ್ಥಾಪಿಸಿದ 6.53 ನಿಮಿಷ).
ಮುಂದೆ ದಕ್ಷಿಣ ವಲಯ ಅಂತರ್ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ.
ಈಕೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಲೋಕೇಶ್ ಟಿ ರವರು ತರಬೇತಿ ನೀಡಿರುತ್ತಾರೆ