ನಟ ನಾಗಭೂಷಣ್ ಕಾರಿಗೆ ಮಹಿಳೆ ಬಲಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಮೃತ ಮಹಿಳೆಯ ಕುಟುಂಬ

ಶೇರ್ ಮಾಡಿ

ನಟ ನಾಗಭೂಷಣ್ ಕಾರು ಡಿಕ್ಕಿಯಾಗಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮೃತ ಪ್ರೇಮಾ ಕುಟುಂಬ ಸದಸ್ಯರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಹೌದು, ಪ್ರೇಮಾ ಅವರ ನೇತ್ರದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಆಸರೆಯಾಗಿದ್ದಾರೆ. ಇನ್ನು ಕೆಂಪೇಗೌಡ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಇದೀಗ ಪೊಲೀಸರು ಸಂಬಂಧಿಕರಿಗೆ ಪ್ರೇಮಾ ಮೃತದೇಹ ಹಸ್ತಾಂತರಿಸಿದ್ದು, ಬೆಂಗಳೂರಿನ ಗಾಯತ್ರಿನಗರದಲ್ಲಿರುವ ಪ್ರೇಮಾ ಅವರ ಮೈದುನ ಜಯರಾಮ್ ಎಂಬುವವರ ನಿವಾಸಕ್ಕೆ ಶವ ರವಾನೆ ಮಾಡಲಾಗಿದೆ.

ಸಂಜೆ ವೇಳೆಗೆ ಹರಿಶ್ಚಂದ್ರಘಾಟ್​ನಲ್ಲಿ ಪ್ರೇಮಾ ಶವಸಂಸ್ಕಾರ
ಹೌದು, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಾಗಭೂಷಣ್​ ಅವರ ಕಾರು ಇಂದು (ಅ.​30) ಬೆಳಿಗ್ಗೆ ಕೋಣನಕುಂಟೆ ಕ್ರಾಸ್​ ಬಳಿ ಈ ಅಪಘಾತವಾಗಿತ್ತು. ಫುಟ್​ ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್​ ಅವರ ಕಾರು ಡಿಕ್ಕಿ ಆಗಿತ್ತು. ಈ ವೇಳೆ ಪ್ರೇಮಾ ಎಂಬುವವರು ಮೃತರಾಗಿದ್ದು, ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಪ್ರೇಮಾ ಮತ್ತು ಕೃಷ್ಣ ದಂಪತಿಯ ಪುತ್ರ ಪಾರ್ಥ ಕೆ. ಅವರು ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರೇಮಾ ಮೃತದೇಹವನ್ನು ಅವರ ಮೈದುನ ಜಯರಾಮ್ ಮನೆಗೆ ರವಾನೆ ಮಾಡಲಾಗಿದ್ದು, ಇಂದು ಸಂಜೆ ವೇಳೆ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಡಿಸಿಪಿ ಹೇಳಿದ್ದಿಷ್ಟು
ಇನ್ನು ಘಟನೆ ಕುರಿತು ಮಾತನಾಡಿದ ಡಿಸಿಪಿ ಶಿವಪ್ರಕಾಶ್ ದೇವರಾಜ್ ‘ನಿನ್ನೆ ರಾತ್ರಿ‌ 9.30 ರಲ್ಲಿ ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಅಪಘಾತವಾಗಿದೆ. ಇಬ್ಬರು ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಅತೀವೇಗ ಮತ್ತು ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ ಎಂದರು. ‘ಪ್ರೇಮ ಅವರು ಆಸ್ಪತ್ರೆ ಸೇರುವ ಮುಂಚೆನೆ ಸಾವನ್ನಪ್ಪಿದ್ದರು. ಕೃಷ್ಣ ಎಂಬುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಟ್ರೋಲ್ ತಪ್ಪಿ ಕಾರು ಪೋಲ್​ಗೂ ಡಿಕ್ಕಿ ಹೊಡೆದಿದೆ. ಕಾರು ಚಾಲಕ ನಾಗಭೂಷಣ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಮದ್ಯಪಾನ ಪರೀಕ್ಷೆಗೂ ಕಳುಹಿಸಲಾಗಿದ್ದು, ಸ್ಟೇಷನ್ ಬೇಲ್ ಕೊಟ್ಟು ವಾಪಾಸ್​ ಕಳುಹಿಸಲಾಗಿದೆ ಎಂದಿದ್ದಾರೆ.

Leave a Reply

error: Content is protected !!
%d bloggers like this: