
ಕೊಕ್ಕಡ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಡಿ ಶಿಬಾಜೆ ಗ್ರಾಮದ ಬೂಡುದಮಕ್ಕಿ ಎಂಬಲ್ಲಿ ಸ್ವಚ್ಛತಾ ಕಾರ್ಯ ಅಕ್ಟೋಬರ್ 1ರಂದು ನಡೆಯಿತು.

ಶಿಬಾಜೆ ಗ್ರಾ. ಪಂ.ಉಪಾಧ್ಯಕ್ಷರು, ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಪಿಡಿಒ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಒಕ್ಕೂಟ ಸದಸ್ಯರು, ಜ್ಞಾನ ವಿಕಾಸ ಮಹಿಳಾ ಸಂಘದ ಸದಸ್ಯರು, ಹಾಗೂ ಸ್ಥಳೀಯ ನಿವಾಸಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

