ಲೈವ್ ಕ್ಲಾಸ್ ವೇಳೆ ಚಪ್ಪಲಿಯಿಂದ ಶಿಕ್ಷಕನಿಗೆ ಮನಬಂದಂತೆ ಹಲ್ಲೆಗೈದ ವಿದ್ಯಾರ್ಥಿ!

ಶೇರ್ ಮಾಡಿ

ಲೈವ್ ಕ್ಲಾಸ್ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಏಕಾಏಕಿ ಬಂದು ಶಿಕ್ಷಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಈ ವಿಲಕ್ಷಣಕರಿ ಘಟನೆಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ..?:
ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಈ ವೇಳೆ ಏಕಾಏಕಿ ಶಿಕ್ಷಕರ ಬಳಿ ಬಂದ ವಿದ್ಯಾರ್ಥಿ ಚಪ್ಪಲಿ ಹಿಡಿದುಕೊಂಡು ಹೊಡೆಯಲು ಶುರು ಮಾಡುತ್ತಾನೆ. ಆಗ ಶಿಕ್ಷಕರು ಆತನನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೂ ವಿದ್ಯಾರ್ಥಿ ಹಲ್ಲೆ ಮುಂದುವರಿಸುತ್ತಾನೆ. ಬಳಿಕ ಅಲ್ಲಿಂದ ಶಿಕ್ಷಕ ತೆರಳುತ್ತಾರೆ.

ವಿದ್ಯಾರ್ಥಿ ಯಾವ ಕಾರಣಕ್ಕೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬುದು ತಿಳಿದುಬಂದಿಲ್ಲ. ಆದರೆ ಹಲ್ಲೆಯ ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಮಂದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
%d