ನಗರದಲ್ಲಿ ಪುಡಿ ರೌಡಿಗಳ ದಾಂಧಲೆ, ನಾಲ್ವರು ವಶಕ್ಕೆ

ಶೇರ್ ಮಾಡಿ

ದಾಂಧಲೆ ಮಾಡುತ್ತಿದ್ದ ನಾಲ್ವರು ಪುಡಿ ರೌಡಿಗಳನ್ನು ಉಡುಪಿ ನಗರದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಮಲು ಪದಾರ್ಥ ಸೇವಿಸಿದ ಇವರು ಹಿರಿಯ ನಾಗರಿಕರೊಬ್ಬರಿಗೆ ಹಲ್ಲೆ ಮಾಡಿದ್ದರು. ಇದನ್ನು ತಡೆಯಲು ಬಂದ ರಿಕ್ಷಾ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ. ಜತೆಗೆ ಸ್ಥಳೀಯ ಅಂಗಡಿಗೂ ನುಗ್ಗಿ ಪುಂಡಾಟಿಕೆ ಮೆರೆದಿದ್ದಾರೆ.

ಕೂಡಲೇ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.

Leave a Reply

error: Content is protected !!
%d