ಮೈಸೂರಿನ ದಸರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಯಕ್ಷಗಾನ ನೃತ್ಯ ವೈಭವ

ಶೇರ್ ಮಾಡಿ

ನಾಡಹಬ್ಬ ದಸರಾದ ಪ್ರಯುಕ್ತ ಮೈಸೂರಿನ ಬಯಲು ರಂಗ ಮಂದಿರದಲ್ಲಿ ನಡೆಯುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕೆಎಸ್ಎಸ್ ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಅ.7ರ ಶನಿವಾರ ಯಕ್ಷಗಾನ ವೈಭವವನ್ನ ಪ್ರದರ್ಶನ ಮಾಡಿದರು.

24 ವಿದ್ಯಾರ್ಥಿಗಳನ್ನು ಒಳಗೊಂಡಂತ ಈ ತಂಡ ಈ ವರ್ಷ ವಿಶೇಷವಾಗಿ ಯಕ್ಷಗಾನ ನೃತ್ಯವನ್ನು ಪ್ರಸ್ತುತಪಡಿಸಿದರು. ನೃತ್ಯ ವಿಶೇಷವಾಗಿ ಮೈಸೂರಿನ ವೀಕ್ಷಕರನ್ನ ಮನಸೂರೆ ಗೊಳಿಸಿತು.

ನೃತ್ಯವನ್ನು ವೀಕ್ಷಿಸಿದ ಮೈಸೂರಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕವಿ ಅದೇ ರೀತಿ ಯುವ ಸಂಭ್ರಮದ ವಿಶೇಷ ಅಧಿಕಾರಿಯಾಗಿರುವಂತ ಶ್ರೀಮತಿ ದೀಪ ಇವರು ವೇದಿಕೆಯಲ್ಲಿ ಹರ್ಷವನ್ನ ವ್ಯಕ್ತಪಡಿಸಿ ತಂಡದ ಪ್ರದರ್ಶನವನ್ನ ಪ್ರಶಂಸಿದರು.

ತಂಡದ ನೇತೃತ್ವವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕರು ಮತ್ತು ಸಾಂಸ್ಕೃತಿಕ ತಂಡದ ಸಂಯೋಜಕರಾದ ವಿನ್ಯಾಸ್ ಹೊಸೊಳಿಕೆ ಮತ್ತು ಹಿಂದಿ ವಿಭಾಗದ ಉಪನ್ಯಾಸಕಿ ಭಕ್ತಿಶ್ರೀ ಇವರು ವಹಿಸಿದ್ದರು. ಪ್ರಮೋದ್ ರೈ ಬೆಳ್ಳಾರೆ ಮತ್ತು ಅಶೋಕ್ ಬೆಳ್ಳಾರೆ ಇವರು ನೃತ್ಯ ಸಂಯೋಜನೆಯನ್ನು ಮಾಡಿದ್ದರು.

Leave a Reply

error: Content is protected !!