ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದಿಂದ ಚಾರ್ಟೆಡ್ ಅಕೌಂಟೆಂಟ್ ಮಾಹಿತಿ ಕಾರ್ಯಕ್ರಮ

ಶೇರ್ ಮಾಡಿ

‌‌ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ, ಇದರ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗ ಹಾಗೂ ಐಕ್ಯೂ ಎಸಿ ಇದರ ಸಹಯೋಗದಲ್ಲಿ ಕಾಲೇಜಿನ ಬಿಕಾಂ ಹಾಗೂ ಬಿಬಿಎ ತರಗತಿಯ ಸಿಎ ಆಕಾಂಕ್ಷಿಗಳಿಗೆ ಬ್ರೈನ್ ಸ್ಟಾರ್ಮಿಂಗ್ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಾಗೂ ಸಿಎ ಪದವಿಯನ್ನು ಪಡೆಯುತ್ತಿರುವಂತಹ ಶಿವಪ್ರಸಾದ್, ರಂಜಿತ್, ಯತೀಂದ್ರ ಹಾಗೂ ಶ್ರಾವ್ಯ ಎಂ.ಎಂ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯ ವಿವಿಧ ಹಂತಗಳು, ಬೇಕಾದ ಅರ್ಹತೆಗಳು ಹಾಗೂ ಭವಿಷ್ಯ ರೂಪಿಸುವ ಸಲಹೆಗಳು ಹಾಗೂ ಅನುಭವವನ್ನು ಸಂಪನ್ಮೂಲ ವ್ಯಕ್ತಿಗಳು ಹಂಚಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ ವಹಿಸಿದ್ದರು. ಕಾಲೇಜಿನ ಐಕ್ಯೂಏಸಿ ಘಟಕದ ಮುಖ್ಯಸ್ಥರು ಹಾಗೂ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾ ಬಿ.ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್.ಎನ್ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿಯಾದ ಕೌಶಿಕ್.ಕೆ ವಂದಿಸಿದರು. ಧಾತ್ರಿ ಗೋಖಲೆ ನಿರೂಪಿಸಿದರು.

Leave a Reply

error: Content is protected !!
%d