ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಮಳೆ: ಅಂಗಡಿಗೆ, ಮನೆಗಳಿಗೆ ನುಗ್ಗಿದ ನೀರು

ಶೇರ್ ಮಾಡಿ

ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಂಜೆ ಸಿಡಿಲು, ಗುಡುಗು ಸಹಿತ ಉತ್ತಮ ಮಳೆ ಸುರಿಯಲಾರಂಬಿಸಿದೆ. ಪರಿಣಾಮ ರಾಷ್ಟ್ರೀಯ ‌ಹೆದ್ದಾರಿ ಪುಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿಯಿಂದ ಮಳೆ ನೀರು ಮುಂಡಾಜೆ ಪೇಟೆಯ ಕೆಲ ಅಂಗಡಿ, ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡುಬಂದಿದೆ.

ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ಚಾರ್ಮಾಡಿ ವಿಪರೀತ ಗುಡುಗು ಸಹಿತ ಮಳೆಯಾಗಿದ್ದು, ರಸ್ತೆಗಳೆಲ್ಲ ನೀರು ತುಂಬಿ ಕೆರೆಯಂತಾಗಿದೆ.

ಹೆದ್ದಾರಿ ಕಾಮಗಾರಿ ಹಿನ್ನೆಲೆ ರಸ್ತೆ ಕೆಸರಮಯವಾಗಿತ್ತು. ಇದೀಗ ಮಳೆಯಿಂದ ನೀರು ಏಕಾಏಕಿ ಹರಿದು ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡುಬಂದಿದೆ.

Leave a Reply

error: Content is protected !!
%d