![](https://i0.wp.com/nesaranewsworld.com/wp-content/uploads/2023/10/Rail-1-620x310-1.jpg?resize=664%2C332&ssl=1)
ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಮೆಷಿನ್ವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ಫಾರ್ಮ್ ನಿಂದ ರೈಲ್ವೇ ಹಳಿಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ಘಟನೆಯಲ್ಲಿ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಸಂಜೆಯ ವೇಳೆಗೆ ಘಟನೆ ನಡೆದಿದ್ದು, ಈ ವೇಳೆ ಯಾವುದೇ ರೈಲು ಆಗಮಿಸದ ಹಿನ್ನೆಲೆಯಲ್ಲಿ ತೊಂದರೆ ಉಂಟಾಗಿಲ್ಲ. ಹಳಿಯಿಂದ ಮೆಷಿನ್ ಅನ್ನು ತತ್ಕ್ಷಣ ತೆರವುಗೊಳಿಸಲಾಯಿತು.
![](https://i0.wp.com/nesaranewsworld.com/wp-content/uploads/2023/10/WhatsApp-Image-2023-09-29-at-10.07.05-1.jpg?resize=350%2C496&ssl=1)
![](https://i0.wp.com/nesaranewsworld.com/wp-content/uploads/2023/09/WhatsApp-Image-2023-06-19-at-2.49.48-PM-1.jpeg?resize=349%2C494&ssl=1)