ಜನವಸತಿ ಪ್ರದೇಶಗಳಲ್ಲಿ ಕಾಡುಕೋಣಗಳ ಹಿಂಡಿನ ಸಂಚಾರ

ಶೇರ್ ಮಾಡಿ

ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಸಂತಡ್ಕ ಹಾಗೂ ಜನವಸತಿ ಪ್ರದೇಶಗಳಲ್ಲಿ ಹತ್ತಾರು ಕಾಡುಕೋಣಗಳ ಹಿಂಡು ಕಂಡುಬಂದಿದ್ದು ಗ್ರಾಮಸ್ಥರು ಭೀತರಾಗಿದ್ದಾರೆ.

ಕೆಯ್ಯೂರು ಗ್ರಾಮದ ಕಣಿಯಾರು ಮಲೆಯಲ್ಲಿ ಚಿರತೆಯು ದನವನ್ನು ಕೊಂದು ರಬ್ಬರ್‌ ಮರದಲ್ಲಿಟ್ಟ ಘಟನೆಯಿಂದ ಆತಂಕದಲ್ಲಿರುವ ಜನತೆಗೆ ಕೆಯ್ಯೂರು ಗ್ರಾಮದ ಪಕ್ಕದ ಪಾಲ್ತಾಡಿಯಲ್ಲಿ ಕಾಡುಕೋಣಗಳ ಹಿಂಡಿನ ಸಂಚಾರ ಆತಂಕವನ್ನು ಹೆಚ್ಚಿಸಿದೆ.

ಕಳೆದ ವರ್ಷವೂ ಅಸಂತಡ್ಕ, ಬಂಬಿಲ, ಅಂಕತಡ್ಕ ಪ್ರದೇಶಗಳಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದ್ದವು. ಅರಣ್ಯ ಇಲಾಖೆಯವರು ಕೂಡಲೇ ಕಾಡುಕೋಣಗಳ ಹಿಂಡನ್ನು ರಕ್ಷಿತಾರಣ್ಯಕ್ಕೆ ಓಡಿಸುವಂತೆ ಆಗ್ರಹ ವ್ಯಕ್ತವಾಗಿದೆ.

Leave a Reply

error: Content is protected !!
%d bloggers like this: