ಮೊಬೈಲ್ ನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ತಾಯಿ ಮೇಲೆ ಮಾರಣಾಂತಿಕ ಹಲ್ಲೆ

ಶೇರ್ ಮಾಡಿ

ಮಧ್ಯರಾತ್ರಿ ಕಳೆದರೂ ಮೊಬೈಲ್‌ ಫೋನ್‌ನಲ್ಲೇ ತಲ್ಲೀನನಾಗಿದ್ದ ಮಗನನ್ನು ಪ್ರಶ್ನಿಸಿದ ತಾಯಿಯನ್ನು ಮಗ ಮರದ ಹಲಗೆಯಿಂದ ತಲೆಗೆ ಹೊಡೆದು ಕೊಲೆಯತ್ನ ನಡೆಸಿದ ಘಟನೆ ನಡೆದಿದೆ.

ನೀಲೇಶ್ವರ ಕಣಿಚ್ಚಿರಕಾವುನಲ್ಲಿ ರಾಜನ್‌ ಅವರ ಪತ್ನಿ ರುಕ್ಮಿಣಿ(64) ಅವರು ಗಂಭೀರ ಗಾಯಗೊಂಡಿದ್ದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪುತ್ರ ಸುಜಿತ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply

error: Content is protected !!