ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ ಎಂಟೆದೆ ಭಂಟ.!

ಶೇರ್ ಮಾಡಿ

ಹಾವುಗಳನ್ನು ಅತ್ಯಂತ ಅಪಾಯಕಾರಿ ಜೀವಿ ಎಂದು ಹೇಳಲಾಗುತ್ತದೆ. ಅದರಲ್ಲೂ ಕೋಬ್ರಾ ಇತ್ಯಾದಿ ಹಾವಿನ ಪ್ರಬೇಧಗಳು ಅತ್ಯಂತ ಅಪಾಯಕಾರಿಯಾಗಿದೆ. ಇದೇ ಕಾರಣಕ್ಕೆ ಹಾವನ್ನು ಕಂಡರೆ ಭಯಬೀತರಾಗಿ ಓಡಿ ಹೋಗುವವರೇ ಹೆಚ್ಚು. ಹೀಗಿದ್ದರೂ ಕೆಲವರು ಹಾವುಗಳನ್ನು ಮನೆಯಲ್ಲಿ ಸಾಕುವುದುಂಟು. ಇಂತಹ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅಲ್ಲದೆ ಉರಗ ತಜ್ಞರು ದೈತ್ಯ ಹಾವುಗಳನ್ನು ಹಿಡಿಯುವಂತಹ ಭಯಾನಕ ವೀಡಿಯೋಗಳು ಕೂಡಾ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಎಲ್ಲರೂ ಹಾವನ್ನು ಕಂಡರೆ ಭಯಬೀತರಾಗಿ ಓಡಿ ಹೋದರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ಭಯವಿಲ್ಲದೆ ನಾಯಿ ಬೆಕ್ಕುಗಳಿಗೆ ಸ್ನಾನ ಮಾಡಿಸುವ ಹಾಗೆ ಭಾರಿ ಗಾತ್ರದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ್ದಾನೆ. ಈತನ ಭಂಡ ದೈರ್ಯಕ್ಕೆ ಮೆಚ್ಚಲೇಬೇಕು ಎಂದು ನೋಡುಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವೈರಲ್ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 19 ಸೆಕೆಂಡುಗಳ ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ದೈತ್ಯ ಗಾತ್ರದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುವುದನ್ನು ಕಾಣಬಹುದು. ಸ್ನಾನಗೃಹದಲ್ಲಿ ಹಾವನ್ನು ಕೂರಿಸಿ ಆ ವ್ಯಕ್ತಿ ತಟ್ಟೆಯಿಂದ (ಮಗ್) ಹಾವಿನ ತಲೆಗೆ ನೀರು ಸುರಿಯುತ್ತಾ ಸ್ನಾನ ಮಾಡಿಸುತ್ತಾನೆ. ಹೀಗೆ ಸ್ನಾನ ಮಾಡಿಸುತ್ತಿರುವಾಗ ನನಗೆ ಸ್ನಾನ ಸಾಕು ಎಂದು ಕಾಳಿಂಗ ಸರ್ಪ ಆ ವ್ಯಕ್ತಿಯ ಕೈಯಲ್ಲಿದ್ದ ಮಗ್ ಅನ್ನು ಕಚ್ಚಿ ಹಿಡಿದುಕೊಳ್ಳುತ್ತದೆ. ತಮಾಷೆಯಾಗಿ ಕಂಡರೂ ಈ ವೀಡಿಯೋ ತುಂಬಾ ಭಯಬೀತವಾಗಿದೆ ಎಂದು ಹಲವರು ಹೇಳಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಅಕ್ಟೋಬರ್ 17ರಂದು ಹಂಚಿಕೊಳ್ಳಲಾದ ಈ ವೀಡಿಯೋ 18.1k ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ಈ ವೀಡಿಯೋವನ್ನು ಕಂಡು ಬೆರಗಾಗಿದ್ದಾರೆ. ಒಬ್ಬ ಬಳಕೆದಾರರು ಸಾಕು ಪ್ರಾಣಿಗಳನ್ನು ಯಾವಾಗಲು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಮಾಷೆಯ ಕಮೆಂಟ್ನ್ನು ಬರೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಇದು ತುಂಬಾ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

Leave a Reply

error: Content is protected !!
%d bloggers like this: