ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಅವರನ್ನು ನಿಂದಿಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಪವರ್ ಟಿ.ವಿ ವ್ಯವಸ್ಥಾಪಕ ನಿರ್ದೆಶಕ ರಾಕೇಶ್ ಶೆಟ್ಟಿ ವಿರುದ್ಧ ವಸಂತ ಬಂಗೇರ ಅವರ ಅಭಿಮಾನಿಗಳು ಬೆಳ್ತಂಗಡಿ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.
ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ರಾಕೇಶ್ ಶೆಟ್ಟಿ ಮಾತನಾಡುತ್ತಾ, ಮಾಜಿ ಶಾಸಕ ವಸಂತ ಬಂಗೇರ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ತನ್ನ ಮಾತುಗಳಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾನೆ.
ಬೆಳ್ತಂಗಡಿಯ ಹಾಗೂ ಉಜಿರೆಯ ಎಲ್ಲ ಜನರೂ ಪಾಪಿಗಳು, ನಾಚಿಕೆ ಇಲ್ಲದವರು ಎಂಬ ರೀತಿಯಲ್ಲಿ ಮಾತನಾಡಿದ್ದಾನೆ. ಇದರಿಂದಾಗಿ ತನಗೆ ಹಾಗೂ ಬಂಗೇರ ಅಭಿಮಾನಿಗಳಿಗೆ ತೀವ್ರ ಆಘಾತವಾಗಿದೆ. ಆದ್ದರಿಂದ ಈ ಬಗ್ಗೆ ಸಮರ್ಪಕವಾದ ತನಿಖೆ ನಡೆಸಿ ರಾಕೇಶ್ ಶೆಟ್ಟಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರವೀಣ್ ಗೌಡ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕಾಶೀಪಟ್ಣ, ನಾಗೇಶ್ ಕುಮಾರ್, ಕಾಂಗ್ರೆಸ್ ಮುಖಂಡರು ಗಳಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನಮಿತಾ ಪೂಜಾರಿ, ಈಶ್ವರ ಭಟ್ ಮನೋಹರ ಕುಮಾರ್, ಗ್ರೇಸಿಯನ್ ವೇಗಸ್, ಜಯ ವಿಕ್ರಮ, ಉಷಾ ಶರತ್, ಸಿ.ಪಿ.ಐ.ಎಂ ಮುಖಂಡ ಬಿ ಎಂ ಭಟ್ , ಶೇಖರ ಲಾಯಿಯ, ಕಾಂಗ್ರೆಸ್ ಮುಖಂಡರು ಗಳಾದ ಅಯ್ಯೂಬ್, ಇಸ್ಮಾಯಿಲ್ ಪೆರಿಂಜೆ, ಸದಾನಂದ ಶೆಟ್ಟಿ, ಪ್ರವೀಣ್ ಗೌಡ, ಅಶ್ರಫ್ ನೆರಿಯ, ಪ್ರಶಾಂತ ವೇಗಸ್ ಹಾಗೂ ಇತರರು ಇದ್ದರು.