ಸುಳ್ಯ ತಾಲೂಕು ಕೋಡಿಯಾಲ ಗ್ರಾಮದ ಮೂವಪೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ.ಎಂ ಅವರು ಅ.19ರಂದು ಸಂಜೆಯಿಂದ ಮರುದಿನ ಅ.20ರಂದು ಬೆಳಿಗ್ಗಿನ ಅವಧಿಯಲ್ಲಿ ಯಾರೊ ಕಳ್ಳರು ಸದರಿ ಅಂಗನವಾಡಿ ಕೇಂದ್ರದ ಚಾವಣಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ, ಅಂಗನವಾಡಿ ಕೇಂದ್ರದ ಒಳಗೆ ದಾಸ್ತನಿದ್ದ ಒಟ್ಟು ರೂ -9,690-/ ಮೌಲ್ಯದ ಆಹಾರ ಸಾಮಗ್ರಿಗಳನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,
ಠಾಣೆಯಲ್ಲಿ ಅ.ಕ್ರ : 69/2023 ಕಲಂ :454,457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ