ಫೋನ್ ಖರೀದಿಸಲು ಹಣ ನೀಡದ ತಾಯಿಯನ್ನೇ ಕತ್ತು ಹಿಸುಕಿ ಕೊಂದು ನಾಟಕವಾಡಿದ ಮಗ

ಶೇರ್ ಮಾಡಿ

ಸ್ಮಾರ್ಟ್‌ಫೋನ್ ಖರೀದಿಸಲು ಹಣ ನೀಡಲಿಲ್ಲವೆಂದು ಮಗನೆ ತನ್ನ ಹೆತ್ತ ತಾಯಿಯನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ನಾಗ್ಪುರದಲ್ಲಿ ನಡೆದಿದೆ.

ಕಮಲಾಬಾಯಿ ಬದ್ವೈಕ್ (47) ಮೃತಪಟ್ಟ ಮಹಿಳೆ. 28 ವರ್ಷದ ರಮಾನಾಥ್ ಕೊಲೆ ಆರೋಪಿಯಾಗಿದ್ದು ಸದ್ಯ ಪೋಲೀಸರ ವಶದಲ್ಲಿದ್ದಾನೆ.

ಘಟನೆ ವಿವರ:
ರಮಾನಾಥ್ ತಾನು ಸ್ಮಾರ್ಟ್ ಫೋನ್ ಖರೀದಿಸಲು ತಾಯಿ ಬಳಿ ಹಣ ಕೇಳಿದ್ದಾನೆ ಇದಕ್ಕೆ ತಾಯಿ ಕಮಲಾಬಾಯಿ ಒಪ್ಪಲಿಲ್ಲ ಇದರಿಂದ ಕುಪಿತಗೊಂಡ ಮಗ ಚೂಡಿದಾರದ ಶಾಲ್ ನಿಂದ ತಾಯಿಯ ಕುತ್ತಿಗೆಗೆ ಬಿದಿದಿದ್ದಾನೆ ಇದರಿಂದ ಪ್ರಜ್ಞೆ ತಪ್ಪಿ ಬಿದ್ದ ತಾಯಿಯನ್ನು ಕಂಡು ಗಾಬರಿಗೊಂಡ ರಮಾನಾಥ್ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ತಾಯಿಯನ್ನು ಆಸ್ಪತ್ರೆಗೆ ಸಾಗಿಸುವ ವಿಚಾರ ರಮಾನಾಥ್ ತನ್ನ ಸಹೋದರನ ಬಳಿ ಹೇಳಿದ್ದಾನೆ, ತಾಯಿಯ ಅರೋಗ್ಯ ಸರಿ ಇಲ್ಲ ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆತಂದಿರುವುದಾಗಿ ಸಹೋದರ ದೀಪಕ್ ಬಳಿ ಹೇಳಿದ್ದಾನೆ, ಸ್ವಲ್ಪ ಹೊತ್ತಿನ ಬಳಿಕ ತಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಕರೆ ಮಾಡಿ ಹೇಳಿದ್ದಾನೆ ಇದರಿಂದ ಗಾಬರಿಗೊಂಡ ದೀಪಕ್ ಕೂಡಲೇ ಆಸ್ಪತ್ರೆಗೆ ದಾವಿಸಿದ್ದಾನೆ.

ಆಸ್ಪತ್ರೆಗೆ ತೆರಳಿ ತಾಯಿಯನ್ನು ಪರಿಶೀಲಿಸಿದಾಗ ತಾಯಿಯ ಕತ್ತಿನ ಬಳಿ ಗಾಯದ ಕಲೆಗಳು ಕಂಡುಬಂದಿತ್ತು ಅಲ್ಲದೆ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳು ಕಾಣೆಯಾಗಿತ್ತು ಇದರಿಂದ ಅನುಮಾನಗೊಂಡ ದೀಪಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಮೃತ ಮಹಿಳೆಯ ಮಗ ರಮಾನಾಥ್ ನನ್ನೇ ತನಿಖೆಗೆ ಒಳಪಡಿಸಿದ್ದಾರೆ ಈ ವೇಳೆ ರಮಾನಾಥ್ ತಾನು ಮೊಬೈಲ್ ಖರೀದಿಸಲು ಅಮ್ಮನ ಬಳಿ ಹಣ ಕೇಳಿದ್ದೆ ಅದಕ್ಕೆ ಅಮ್ಮ ಒಪ್ಪಲಿಲ್ಲ ಕೋಪದಿಂದ ಶಾಲ್ ನಿಂದ ಕುತ್ತಿಗೆಗೆ ಬಿಗಿದು ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿ ರಮಾನಾಥ್ ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
%d