
ಕೇಂದ್ರ ಕಾರಾಗೃಹದ ಮೇಲೆ ತುಂಗಾನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದು, ಬೀಡಿ, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರಾಗೃಹದ ಎಲ್ಲಾ ಬ್ಲಾಕ್‌ನ ಸೆಲ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ತುಂಗಾನಗರ ಮೆಗಾ ಬ್ಲ್ಯಾಕ್‌ನ ಕೊಠಡಿ ಸಂಖ್ಯೆ 12ರ ಮುಂಭಾಗದ ಕೈ ತೋಟದಲ್ಲಿ ಗಿಡಗಳ ಮಧ್ಯೆ ತಪಾಸಣೆ ನಡೆಸಿದ ಪೊಲೀಸರಿಗೆ ಅನೇಕ ವಸ್ತುಗಳ ಸಿಕ್ಕಿವೆ.
ಮಣ್ಣು ಅಗೆದು ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್ ಪತ್ತೆಯಾಗಿದೆ. ಪತ್ತೆಯಾದ ಮೊಬೈಲ್ ನಲ್ಲಿ ಯಾವುದೇ ಸಿಮ್ ಇರಲಿಲ್ಲ ಎನ್ನಲಾಗಿದೆ.
ಇನ್ನೂ ಸೆಲ್ ನಂ.36ರ ಸಮೀಪ ಗಿಡಗಳ ಮಧ್ಯೆ ಮಂಗಳೂರು ಸ್ಪೆಷಲ್ ಬೀಡಿಗಳು, ಬೆಂಕಿಪೊಟ್ಟಣ, ಯುಎಸ್‌ಬಿ ಚಾರ್ಜರ್, ಚಿಕ್ಕ ಬ್ಲೇಡ್, ಕತ್ತರಿ ಪತ್ತೆಯಾಗಿದೆ. ಇವುಗಳನ್ನೆಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದು, ತುಂಗಾನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

