62ರ ಹರೆಯದ ತಂದೆಗೆ 60ರ ಸಂಗಾತಿ ಹುಡುಕಿ ಮದುವೆ ಮಾಡಿಸಿದ ಮಕ್ಕಳು

ಶೇರ್ ಮಾಡಿ

ಪತ್ನಿಯ ನಿಧನದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ತಂದೆಗೆ 62 ರ ವಯಸ್ಸಿನಲ್ಲಿ ಮಕ್ಕಳೇ ಸೇರಿಕೊಂಡು ಮತ್ತೊಂದು ಮದುವೆ ಮಾಡಿಸಿದ್ದಾರೆ.

ಕೇರಳದ ಪೊಟ್ಟನ್‌ಮಲಾ ಮೂಲದ ರಾಧಾಕೃಷ್ಣನ್‌ ತಮ್ಮ ಪತ್ನಿಯನ್ನು ಕಳೆದ ಒಂದು ವರ್ಷದಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಪತ್ನಿ ಇಲ್ಲದೆ ಇದ್ದರೂ ತನ್ನ ಮೂವರು ಮಕ್ಕಳೊಂದಿಗೆ ಖುಷಿ ಆಗಿದ್ದ‌ ರಾಧಾಕೃಷ್ಣನ್‌ ಅವರಿಗೆ ಒಂಟಿತನ ಕಾಡುತ್ತಿತ್ತು.

ಮಕ್ಕಳು ಕೂಡ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ತಂದೆಯ ಒಂಟಿತನದ ಮೌನವನ್ನು ಗಮನಿಸಿದ ಮಕ್ಕಳಾದ ರಶ್ಮಿ ಮತ್ತು ರಂಜು ಅವರು ತಂದೆಗೆ 62 ವಯಸ್ಸಿನಲ್ಲಿ ಸಂಗಾತಿಯನ್ನು ಹುಡಕಲು ಮುಂದಾಗಿದ್ದಾರೆ. ಈ ವಿಚಾರದಲ್ಲಿ ತಂದೆಯ ಮನವೊಲಿಸಿದ ಮಕ್ಕಳು ಸಂಗಾತಿಯನ್ನು ಹುಡುಕಿದ್ದಾರೆ.

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಹೊಂದಿಕೆಯಾಗುವ ಸಂಗಾತಿಯನ್ನು ಮಕ್ಕಳು ಹುಡುಕಿದ್ದಾರೆ. ಅದರಂತೆ ಅಡೂರಿನ ಮಲ್ಲಿಕಾ ಕುಮಾರಿ (60) ಅವರನ್ನು ಆಯ್ದುಕೊಂಡು ಮಕ್ಕಳೇ ಮುಂದೆ ನಿಂತು ಎರಂಕಾವು ಭಗವತಿ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ.

ಮಲ್ಲಿಕಾ ಕುಮಾರಿ ಅವರ ಪತಿ 5 ವರ್ಷಗಳ ಹಿಂದೆ ನಿಧನರಾಗಿದ್ದು, ಅವರಿಗೆ ಮಕ್ಕಳಾಗಿರಲಿಲ್ಲ. ಕುಟಂಬದವರ ಮುಂದೆ ಅದ್ಧೂರಿಯಾಗಿಯೇ ತನ್ನ ತಂದೆಯ ವಿವಾಹವನ್ನು ಮಕ್ಕಳು ಮಾಡಿಸಿದ್ದಾರೆ.

Leave a Reply

error: Content is protected !!
%d bloggers like this: