ಹುಲಿ ಉಗುರು ಕಂಟಕ: ದರ್ಶನ್, ಜಗ್ಗೇಶ್, ನಿಖಿಲ್ ಕ್ರಮಕ್ಕೆ ಒತ್ತಾಯ

ಶೇರ್ ಮಾಡಿ

ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದರು ಎನ್ನುವ ಕಾರಣ್ಕಕಾಗಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮೊನ್ನೆಯಷ್ಟೇ ಬಂಧನವಾಗಿದ್ದಾರೆ. ಅವರನ್ನು ಜೈಲಿಗೂ ಕಳುಹಿಸಿ ಆಗಿದೆ. ಸಂತೋಷ್ ಬಂಧನದ ಬೆನ್ನಲ್ಲೇ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೂ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದೇವಸ್ಥಾನವೊಂದರ ಸ್ಥಳದಲ್ಲಿ ನಿಂತು ತೆಗೆದಿರುವ ದರ್ಶನ್ ಅವರ ಫೋಟೋದಲ್ಲಿ ಅವರು ಹುಲಿ ಉಗುರು ಧರಿಸಿದ್ದಾರೆ. ಅಲ್ಲದೇ, ನಿಖಿಲ್ ಮದುವೆ ಸಂದರ್ಭದಲ್ಲಿ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡಿದ್ದಾರೆ. ನಟ ಜಗ್ಗೇಶ್ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹುಲಿ ಉಗುರಿನ ಪೆಂಡೆಂಟ್ ತೋರಿಸುತ್ತಾ, ‘ಇದನ್ನು ನನ್ನ ತಾಯಿ ಕೊಟ್ಟಿದ್ದಾರೆ. ಮಗ ಹುಲಿಯಂತೆ ಇರಲಿ’ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಸ್ಯಾಂಡಲ್ ವುಡ್ ಸಿಲೆಬ್ರಿಟಿಗಳು ಅಲ್ಲದೇ, ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರುವ ಮತ್ತು ಅರ್ಚಕರೊಬ್ಬರು ಹುಲಿ ಉಗುರಿನ ಸರ ಹಾಕಿರುವ ಕುರಿತಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಎಲ್ಲರಿಗೂ ನೋಟಿಸ್ ಕೊಡುವುದಾಗಿ ಉನ್ನತ ಮಟ್ಟದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಅರಣ್ಯಾ ಇಲಾಖೆಯ ಅಧಿಕಾರಿಗ ಕಚೇರಿಗೆ ಸಾಲು ಸಾಲು ದೂರುಗಳು ಬರುತ್ತಿವೆ. ಜನತಾ ಪಕ್ಷದ ನಾಗೇಶ್ ಅವರು ಜಗ್ಗೇಶ್ ಮತ್ತು ದರ್ಶನ್ ಅವರ ಮೇಲೆ ದೂರು ನೀಡಿದ್ದು, ‘ಬಿಜೆಪಿ ಮುಖಂಡ ಜಗ್ಗೇಶ್ ಅವರು ಹುಲಿ ಉಗುರಿನ ಬಗ್ಗೆ ಮಾತನಾಡಿದ್ದಾರೆ. ಆದರೂ, ಅರಣ್ಯಾಧಿಕಾರಿಗಳು ಮೌನವಾಗಿದ್ದಾರೆ. ಬಡವರು, ರೈತರು, ವನ್ಯ ಜೀವಿಗಳನ್ನು ಕೊಂದು ಕೇಸ್ ಹಾಕ್ತಾರೆ. ಜಗ್ಗೇಶ್, ದರ್ಶನ್, ವಿನಯ್ ಗುರೂಜಿ ಮೇಲೆ ಕ್ರಮ ಯಾಕೆ ತಗೆದುಕೊಂಡಿಲ್ಲ’ ಎಂದು ಕೇಳಿದ್ದಾರೆ.

Leave a Reply

error: Content is protected !!
%d