ಮಾರುತಿ ನಾಯ್ಕ್ ಆತ್ಮಹತ್ಯೆ ಕೇಸ್; ಕಾರವಾರ ಪೊಲೀಸ್​​ ಠಾಣಾ ಇನ್ಸ್​ಪೆಕ್ಟರ್​​​ ಕೆ.ಕುಸುಮಾಧರ, ಪಿಎಸ್​ಐ ಶಾಂತಿನಾಥ ಮತ್ತು ಕಾನ್ಸ್​ಟೇಬಲ್​​​​​ ದೇವರಾಜ್​ ಅಮಾನತು

ಶೇರ್ ಮಾಡಿ

ಮಾರುತಿ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಕಾರವಾರ ಪೊಲೀಸ್​​ ಠಾಣಾ ಇನ್ಸ್​ಪೆಕ್ಟರ್​​​ ಕೆ.ಕುಸುಮಾಧರ, ಪಿಎಸ್​ಐ ಶಾಂತಿನಾಥ ಮತ್ತು ಕಾನ್ಸ್​ಟೇಬಲ್​​​​​ ದೇವರಾಜ್​ರನ್ನು ಅಮಾನತು ಮಾಡಿ ಎಸ್​ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧ ದಲಿತ ಮುಖಂಡ ಎಲಿಷಾ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿದ್ದಕ್ಕೆ ಮಾರುತಿ ನಾಯ್ಕ್ ಮೇಲೆ ಹಲ್ಲೆ ಮಾಡಲಾಗಿತ್ತು.

ದಲಿತ ಮುಖಂಡ ಎಲಿಷಾ ಎಲಕಪಾಟಿ ಕುಟುಂಬದ ವಿರುದ್ಧ ಹಲ್ಲೆ ಆರೋಪ ಮಾಡಿದ್ದು, ಈ ಬಗ್ಗೆ ಕಾರವಾರ ಠಾಣೆಯಲ್ಲಿ ಮಾರುತಿ ನಾಯ್ಕ್ ದೂರು ನೀಡಿದ್ದ.​​​ ಆದರೆ ಪೊಲೀಸರು ಆರೋಪಿಗಳ ಪರ ಕೆಲಸ ಮಾಡಿ, ಕಿರುಕುಳ ಆರೋಪ ಮಾಡಲಾಗಿದೆ. ಹಾಗಾಗಿ ಡೆತ್​ನೋಟ್​​ ಬರೆದು ಮಾರುತಿ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದ.

ಪೊಲೀಸರು, ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಸೇರಿದಂತೆ ಹಲವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕರಣದ ಗಂಭೀರತೆ ಹಿನ್ನೆಲೆ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ತನ್ನ ಪುತ್ರನ ಚಡ್ಡಿಯ ಕಿಸೆಯಲ್ಲಿ ಸುಸೈಡ್ ನೋಟ್ ಇಟ್ಟು ಪತ್ನಿಗೆ ನೀಡುವಂತೆ ಮಾರುತಿ ಹೇಳಿದ್ದರು. ಡೆತ್ ನೋಟ್‌ನಲ್ಲಿ ನನ್ನ ಆತ್ಮಹತ್ಯೆಗೆ ಪೊಲೀಸರು ಹಾಗೂ ಎಲಿಷಾ ಕುಟುಂಬಸ್ಥರು ಕಾರಣ ಎಂದು ಆರೋಪಿಸಿದ್ದರು.

ಡೆತ್ ನೋಟ್‌ನಲ್ಲಿ ಪೊಲೀಸ್ ಸಿಬ್ಬಂದಿ ದೇವರಾಜ, ಎಲಿಷಾ ಕುಟುಂಬಸ್ಥ ಬಸವರಾಜ, ಸುರೇಶ್, ನಾಗಮ್ಮ ಹೆಸರು ಬರೆದಿದ್ದರು. ಇತ್ತ ಪತಿಯನ್ನು ಕಳೆದುಕೊಂಡ ಮಾರುತಿ ಪತ್ನಿ ರಾಧಾ, ಕಣ್ಣೀರು ಹಾಕಿದ್ದು, ಪತಿಯ ಸಾವಿಗೆ ನ್ಯಾಯ ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

error: Content is protected !!