ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡಬಿದಿರೆ ಇವರ ಸಹಯೋಗದೊಂದಿಗೆ ಸ್ವರಾಜ್ ಮೈದಾನ ಮೂಡಬಿದ್ರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ನಂದನಾ ಶಾಟ್ ಪುಟ್, ಅವನಿ ಪಿ.ಬಿ. ಎತ್ತರ ಜಿಗಿತ ಹಾಗೂ ರಿಲೇ ತಂಡದ ವಿದ್ಯಾರ್ಥಿಗಳಾದ ಕುಮಾರಿ ಫಿದಾ, ತೀಕ್ಷಾ,ಅವನಿ, ಧ್ರತಿ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ನವೆಂಬರ್ 2 ಮತ್ತು 3 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಲಿದ್ದಾರೆ.

ಸಂಸ್ಥೆಯ ಸಂಚಾಲಕರಾದ ವಂದನೀಯ ಫಾದರ್ ಪೌಲ್ ಪ್ರಕಾಶ್ ಡಿ’ಸೋಜಾ ಹಾಗೂ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್ ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಕರಾದ ಸಮದ್ ಮತ್ತು ಅರುಣ್ ತರಬೇತಿಯನ್ನು ನೀಡಿರುತ್ತಾರೆ

Leave a Reply

error: Content is protected !!