93ನೇ ವಯಸ್ಸಿನಲ್ಲಿ ಪಿಎಚ್ ಡಿ ಪದವಿ ಗಳಿಸಿದ್ದಾರೆ! ಅಜ್ಜಿಯ ಸ್ಪೂರ್ತಿದಾಯಕ ಪಯಣ ಹೀಗಿದೆ

ಶೇರ್ ಮಾಡಿ

ನಿನ್ನೆಯಷ್ಟೇ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ 83ನೇ ಪದವಿ ಪ್ರದಾನ ಸಮಾರಂಭ ನಡೆದಿದ್ದು ಗೊತ್ತೇ ಇದೆ. ಕುತೂಹಲಕಾರಿ ಸಂಗತಿಯೆಂದರೆ 93 ವರ್ಷದ ಅಜ್ಜಿಯೊಬ್ಬರು ಈ ಕಾರ್ಯಕ್ರಮದಲ್ಲಿ ಪಿಎಚ್‌ಡಿ ಪದವಿ (PhD) ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ, ಕಲಿಯುವ ಕುತೂಹಲ ಇರಬೇಕಷ್ಟೇ, ವಯಸ್ಸು ಒಂದು ಅಂಕೆಯಲ್ಲ ಎಂಬುದನ್ನು ಈ ಅಜ್ಜಿ ಮತ್ತೊಮ್ಮೆ ಸಾಬೀತು ಮಾಡಿದರು.

ಡಾ.ರೇವತಿ ತಂಗವೇಲು ಯಾರು..? ಶಿಕ್ಷಕಿಯಾಗಿ ನಿವೃತ್ತಿಯಾದ ಮೇಲೆ ನಿಂತ ನೀರಾಗಲು ಬಯಸಲಿಲ್ಲ ಅವರು ತೆಲಂಗಾಣ ರಾಜಧಾನಿ ಹೈದರಾಬಾದ್ ಮೂಲದ ರೇವತಿ ತಂಗವೇಲು ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿ 1990ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಅವರು ಅಲ್ಲಿಗೇ ನಿಂತ ನೀರಾಗಲು ಬಯಸಲಿಲ್ಲ. ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಅವರು ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಮಾಡಲು ಬಯಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನೂ ಪಡೆದರು. ರೇವತಿ ತಂಗವೇಲು ಅವರು ಇಂಗ್ಲಿಷ್ ವ್ಯಾಕರಣ, ವರ್ಣಮಾಲೆ ಮತ್ತು ಪದ ಸಂಯೋಜನೆಯಂತಹ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ! ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರೈಸಿರುವ ರೇವತಿ ತಂಗವೇಲು ಅವರು ಇದೀಗ ಉಸ್ಮಾನಿಯಾ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಪಿಎಚ್‌ಡಿ ಪದವಿ ಪಡೆದರು.

ಉಸ್ಮಾನಿಯಾ ವಿಶ್ವವಿದ್ಯಾಲಯದ 83ನೇ ಘಟಿಕೋತ್ಸವ ಮಂಗಳವಾರ ಹೈದರಾಬಾದಿನ ಟ್ಯಾಗೋರ್ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ, 93 ವರ್ಷದ ಅಜ್ಜಿ ತಮ್ಮ ಪಿಎಚ್‌ಡಿ ಪದವಿಯನ್ನು ಪಡೆದರು ಮತ್ತು ಅನೇಕ ಜನರಿಗೆ ಸ್ಫೂರ್ತಿಯಾದರು. ಓದು, ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ರೇವತಿ ತಂಗವೇಲು ಅವರ ಸ್ಪೂರ್ತಿದಾಯಕ ಪಯಣವೇ ಸಾಕ್ಷಿ. ಪ್ರಸ್ತುತ, ಅವರು ಕೀಸ್ ಎಜುಕೇಷನಲ್ ಸೊಸೈಟಿ, ಸಿಕಂದರಾಬಾದ್‌ನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದ ಶಾಂತನು ನಾರಾಯಣ ಅವರಿಗೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಉಸ್ಮಾನಿಯಾ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದುವರೆಗೆ 1,024 ಮಂದಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಓಯು ವ್ಯಾಪ್ತಿಯಲ್ಲಿ ತಮ್ಮ ವಿಭಾಗಗಳಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ 58 ಮಂದಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

Leave a Reply

error: Content is protected !!