ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

ಶೇರ್ ಮಾಡಿ

ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯುವ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ.

ಕನ್ನಡ ಕಿರುತೆರೆಯ ಬಹುತೇಕ ರಿಯಾಲಿಟಿ ಶೋಗಳಲ್ಲಿ ಮನೋಜ್ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರವೀಣ್ ಡಿ ರಾವ್ ಅವರ ಅನೇಕ ಧಾರಾವಾಹಿ ಶೀರ್ಷಿಕೆಗಳಿಗೆ ಮನೋಜ್ ವಸಿಷ್ಠ ಕೆಲಸ ಮಾಡಿದ್ದಾರೆ. ಪತ್ನಿ ಅರುಂಧತಿ ಕೂಡ ಗಾಯಕಿ. ಕನ್ನಡ ಕೋಗಿಲೆ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಅರುಂಧತಿ ಮತ್ತು ಮನೋಜ್ ಒಟ್ಟಿಗೆ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ರಿಯಾಲಿಟಿ ಶೋಗಳು ಮಾತ್ರವಲ್ಲ, ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನೂ ಈ ಜೋಡಿ ನೀಡಿದೆ. ಅಗಲಿದ ಮನೋಜ್ ಅವರಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಮಧ್ಯಾಹ್ನದ ನಂತರ ಮನೋಜ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಜಯನಗರ ಹೌಸಿಂಗ್ ಸೊಸೈಟಿ ಬಳಿಯ ಬೇ ಅಪಾರ್ಟ್ಮೆಂಟ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.

Leave a Reply

error: Content is protected !!