ಮೂಡುಬಿದಿರೆ ಮಿಜಾರುಗುತ್ತು ಆನಂದ ಆಳ್ವರ ಅಂತ್ಯಕ್ರಿಯೆ

ಶೇರ್ ಮಾಡಿ

ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಅಂತ್ಯಕ್ರಿಯೆಯು ಮಿಜಾರಿನ ಸ್ವಗೃಹದ ವಠಾರದಲ್ಲಿ ಬುಧವಾರ ನಡೆಯಿತು.

ಬೆಳಗ್ಗೆ 9.30ರಿಂದ 11.45ರ ತನಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಂಟ ಸಮುದಾಯದ ಸಕಲ ವಿಧಿವಿಧಾನಗಳನ್ನು ಪೂರೈಸಿದ ಅನಂತರ ಸ್ವಗೃಹದ ಹತ್ತಿರದ ತೋಟದಲ್ಲಿ ಪುತ್ರರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಟಲದಾಸ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಚೌಟರ ಅರಮನೆ ಕುಲದೀಪ, ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ ಕುಮಾರ್‌, ಧರ್ಮಗುರುಗಳಾದ ರೆ|ಫಾ| ಎಫ್‌.ಎಕ್ಸ್‌. ಗೋಮ್ಸ್‌, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಮೂಡುಬಿದಿರೆ ಶಾಸಕ ಉಮಾನಾಥ ಎ.ಕೋಟ್ಯಾನ್‌, ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಮಾಜಿ ಸಚಿವರಾದ ಕೆ. ಅಭಯಚಂದ್ರ, ಬಿ. ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಬಿ.ನಾಗರಾಜ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಐವನ್‌ ಡಿ’ಸೋಜಾ, ಕಾಂಗ್ರೆಸ್‌ ಮುಖಂಡರಾದ ರಕ್ಷಿತ್‌ ಶಿವರಾಮ್‌, ಜಯಶ್ರೀ ಅಮರನಾಥ ಶೆಟ್ಟಿ, ನಿಟ್ಟೆ ಸಮೂಹ ಸಂಸ್ಥೆಗಳ ಎನ್‌.ವಿನಯ ಹೆಗ್ಡೆ, ಉದ್ಯಮಿ ಶ್ರೀಪತಿ ಭಟ್‌, ಶಶಿಧರ್‌ ಶೆಟ್ಟಿ ಬರೋಡಾ, ಎಂ.ಆರ್‌.ಅರವಿಂದ ಪೂಂಜಾ, ಶಕ್ತಿ ಕಾಲೇಜಿನ ಕೆಸಿ ನಾೖಕ್‌, ಜಾಗತಿಕ ಬಂಟ್ಸ್‌ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ದೇವದಾಸ್‌ ಕಾಪಿಕಾಡ್‌, ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪಳ್ಳಿ ಕಿಶನ್‌ ಹೆಗ್ಡೆ, ಮಂಗಳೂರು ವಿ.ವಿ.ಯ ಡಾ|ಕಿಶೋರ ಕುಮಾರ್‌, ಪ್ರಮುಖರಾದ ಬೃಜೇಶ್‌ ಚೌಟ, ಕೋಟಿಪ್ರಸಾದ್‌ ಆಳ್ವ, ಆಳ್ವಾಸ್‌ ಸಂಸ್ಥೆಯ ಉದ್ಯೋಗಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಂತಾಪ ಸೂಚಕವಾಗಿ ಮಿಜಾರು ತೋಡಾರಿನ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಅರ್ಧ ದಿನದ ವರೆಗೆ ಮುಚ್ಚಿದ್ದವು.

Leave a Reply

error: Content is protected !!