ಕುಟುಂಬದಲ್ಲಿ ಹಣಕಾಸಿಗೇನು ಕೊರತೆ ಇರಲಿಲ್ಲ. ಕೋಟಿ ಕೋಟಿಯಷ್ಟು ಹಣ ಇದ್ರೂ ಹಣದ ದಾಹ ತೀರಲಿಲ್ಲ. ಹಣದ ದಾಹದ ಜೊತೆಗೆ ಗಂಡನಿಗೆ ಹೆಂಡತಿ ಮೇಲೆ ಸಂಶಯ. ಮಾವನಿಗೆ ಸೊಸೆ ಮೇಲೆ ಅನುಮಾನ. ಕೊನೆಗೆ ಸಿಕ್ಕ ಫಲಿತಾಂಶ ಆತ್ಮಹತ್ಯೆ.
ಅಮೇರಿಕಾದಲ್ಲಿ ಚೆನ್ನಾಗಿ ಓದಿ ಉನ್ನತ ವ್ಯಾಸಂಗ ಮಾಡಿದ್ದ ಐಶ್ವರ್ಯ ಚಂದ್ರಲೇಔಟ್ ನ ನಿವಾಸಿ ಸುಬ್ರಹ್ಮಣಿಯವರ ಏಕೈಕ ಪುತ್ರಿ. ಸುಬ್ರಹ್ಮಣಿಯೂ ಆಸ್ತಿ ಅಂತಸ್ತಿನಲ್ಲಿ ಸ್ವಲ್ಪ ಚೆನ್ನಾಗಿಯೇ ಇದ್ದರು. ತನ್ನ ಮಗಳನ್ನ ತನಗಿಂತ ಸಿರಿವಂತನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಆಸೆ ಇತ್ತು. ಅದರಂತೆ ಹೆಸರಾಂತ ಡೈರಿ ರೀಚಿ ಐಸ್ ಕ್ರೀಂ ನ ಮಾಲೀಕರಾದ ಗಿರಿಯಪ್ಪ ಅವರ ಮಗ ರಾಜೇಶ್‍ಗೆ ಐದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ರು. ಮದ್ವೆ ಮೊದ ಮೊದಲು ಜೀವನ ಚೆನ್ನಾಗಿಯೇ ಇತ್ತು.
ಐಶ್ವರ್ಯ ಬಾಳಲ್ಲಿ ವಿಲನ್ ಆದ ಚಿಕ್ಕಪ್ಪ: ಗಿರಿಯಪ್ಪ ಸಂಬಂಧ ಕುದಿರಿಸಿದ್ದು ಐಶ್ವರ್ಯ ಚಿಕ್ಕಪ್ಪ ಅರ್ಥಾತ್ ಸುಬ್ರಹ್ಮಣಿಯ ತಮ್ಮ. ಅಣ್ಣನ ಮಗಳಿಗೆ ಒಳ್ಳೆಯ ಸಂಬಂಧ ನೋಡಿದ ರವೀಂದ್ರ ಸ್ರುಬ್ಮಹ್ಮಣಿಯ ಜೊತೆ ಆಸ್ತಿ ಕಲಹ ಮಾಡಿಕೊಂಡ. ಇದನ್ನ ಸೇಡು ತೀರಿಸಿಕೊಳ್ಳುವ ಸಲುವಾಗಿ ರವೀಂದ್ರ, ಗಿರಿಯಪ್ಪ ಮತ್ತು ರಾಜೇಶ್‍ಗೆ ಚಾಡಿ ಹೇಳಿಕೊಡಲು ಶುರು ಮಾಡಿದ್ದಾನೆ.
ಐಶ್ವರ್ಯ ಮೇಲೆ ಸಂಶಯ ಬರೋ ಹಾಗೇ ಮಾಡಿದ್ದಾನೆ. ಬಳಿಕ ವರದಕ್ಷಿಣೆಗೆ ಪೀಡಿಸುವಂತೆ ಕಿವಿ ಊದಿದ್ದಾನೆ. ರವೀಂದ್ರ ಮಾತು ಕೇಳಿದ ಗಿರಿಯಪ್ಪ, ರಾಜೇಶ್, ಸೀತಾ ಎಲ್ಲಾ ಐಶ್ವರ್ಯಗೆ ಮಾನಸಿಕ ಹಿಂಸೆ ನೀಡಿದ್ದಾರೆ.
ಯಾವಾಗ ಅತ್ತೆ ಮಾವ, ಗಂಡ ನಾದಿನಿ ಎಲ್ಲಾ ಮೇಲಿಂದ ಮೇಲೆ ಹಿಂಸೆ ಕೊಡೋದಕ್ಕೆ ಶುರು ಮಾಡಿದ್ರೋ ಮನೆ ಬಿಟ್ಟು ಹೊರಗೆ ಬರೋ ನಿರ್ಧಾರ ಮಾಡಿ ತಂದೆ ಮನೆಗೆ ಐಶ್ವರ್ಯ ಬಂದು ಬಿಟ್ಟಿದ್ದಳು. ಆದರೆ ಅಲ್ಲೂ ನೆಮ್ಮದಿಯಾಗಿ ಇರೋದಕ್ಕೆ ಬಿಡದ ಗಂಡ ರಾಜೇಶ್ ಭಯಾನಕ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಐಶ್ವರ್ಯ ಎಳೆ ಎಳೆಯಾಗಿ ಕಷ್ಟದ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣದ ತನಿಖೆ ನಡೆಸಿದ ಗೋವಿಂದರಾಜ ನಗರ ಪೊಲೀಸರು, ಅಗರ್ಭ ಶ್ರೀಮಂತ ಗಿರಿಯಪ್ಪ, ಸೀತಾ, ಐಶ್ವರ್ಯ ಪತಿ ರಾಜೇಶ್‍ನ ಬಂಧಿಸಿ ವಿಚಾರಣೆ ನಡೆಸಿದೆ. ತಾನು ಮಾಡಿದ ತಪ್ಪಿಗೆ ಹಿಂಸೆ ಅನುಭವಿಸಿದ ಐಶ್ವರ್ಯ ಇಹಲೋಕ ತ್ಯಜಿಸಿದ್ದಾಳೆ.