‘ಒಟ್ಟಿಗೆ ನಟಿಸುವಾಗಲೇ ಯಾವುದೂ ಸರಿ ಇರಲಿಲ್ಲ’; ಸಂಗೀತಾ ಜೊತೆಗಿನ ಕಿತ್ತಾಟಕ್ಕೆ ಕಾರಣ ತಿಳಿಸಿದ ವಿನಯ್

ಶೇರ್ ಮಾಡಿ

ಮನೆಯಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಒಂದೇ ಧಾರಾವಾಹಿಯಲ್ಲಿ ನಟಿಸಿದ ಹೊರತಾಗಿಯೂ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಇವರ ಮಧ್ಯೆ ಇಷ್ಟೊಂದು ಕಿತ್ತಾಟ ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ವಿನಯ್ ಕಡೆಯಿಂದ ಉತ್ತರ ಸಿಕ್ಕಿದೆ. ಅವರು ಈ ಕಿತ್ತಾಟಕ್ಕೆ ಕಾರಣವಾಗಿರೋ ವಿಚಾರ ಯಾವುದು ಎಂಬುದನ್ನು ವಿವರಿಸಿದ್ದಾರೆ.

ವಿನಯ್ ಹಾಗೂ ಸಂಗೀತಾ ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಸಾಮಾನ್ಯವಾಗಿ ಒಂದೇ ಧಾರಾವಾಹಿಯಲ್ಲಿ ನಟಿಸಿದರೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿರುತ್ತದೆ. ಇವರ ಮಧ್ಯೆಯೂ ಅದೇ ರ‍್ಯಾಪೋ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಮೊದಲ ವಾರದಿಂದಲೇ ಇವರು ಕಚ್ಚಾಡಿಕೊಂಡರು. ಈ ವಾರವಂತೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಇವರ ಜಗಳ. ಈ ಬಗ್ಗೆ ವರ್ತೂರು ಸಂತೋಷ್​ಗೆ ಪ್ರಶ್ನೆ ಮೂಡಿದೆ.

‘ಅಣ್ಣ ನೀವಿಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದವರು. ಆದರೂ ಯಾಕಿಷ್ಟು ಕಿತ್ತಾಟ? ಧಾರಾವಾಹಿಯಲ್ಲಿ ನಟಿಸುವಾಗಲೇ ನಿಮ್ಮ ಮಧ್ಯೆ ವೈರುಧ್ಯ ಇತ್ತೇ’ ಎಂದು ವಿನಯ್​ಗೆ ವರ್ತೂರು ಸಂತೋಷ್ ಪ್ರಶ್ನೆ ಮಾಡಿದ್ದಾರೆ. ‘ಹೌದು ಇತ್ತು. ಅವಳಿಗೆ ಯಾವಾಗಲೂ ನನಗಿಂತ ಚೆನ್ನಾಗಿ ಆ್ಯಕ್ಟ್ ಮಾಡಬೇಕು, ನನಗಿಂತ ಉತ್ತಮವಾಗಿರಬೇಕು ಎಂದುಕೊಳ್ಳುತ್ತಾಳೆ’ ಎಂದಿದ್ದಾರೆ ವಿನಯ್. ಇದೇ ಇಬ್ಬರೂ ಜಗಳಕ್ಕೆ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರು ಎಲ್ಲರಿಗೂ ಏಕವಚನ ಕೊಟ್ಟು ಮಾತನಾಡಿಸುತ್ತಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿಲ್ಲ. ಈ ವಾರ ಸುದೀಪ್ ಅವರು ವಿನಯ್​ಗೆ ಕ್ಲಾಸ್ ತೆಗೆದುಕೊಳ್ಳಲಿ ಎಂದು ಅನೇಕರು ಕೋರಿದ್ದಾರೆ.

Leave a Reply

error: Content is protected !!