ಪುರುಷರೇ ಹುಷಾರ್…!ನಿಮ್ಮ ಮೊಬೈಲ್ ಫೋನ್ ನಿಮ್ಮನ್ನು ನಪುಂಸಕರನ್ನಾಗಿಸಬಹುದು, ಕಾರಣ ಇಲ್ಲಿದೆ!

ಶೇರ್ ಮಾಡಿ

ಹೊಸ ಅಧ್ಯಯನದ ಪ್ರಕಾರ ಮೊಬೈಲ್ ಫೋನ್ ಬಳಸುವುದರಿಂದ ಪುರುಷರಲ್ಲಿ ದುರ್ಬಲತೆಯ ಅಪಾಯ ಹೆಚ್ಚಾಗುತ್ತದೆ ಎನ್ನಲಾಗಿದೆ. ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪುರುಷರ ಫೋನ್‌ಗಳು ಅವರ ಬಂಜೆತನದ ಅಪಾಯವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ಹೇಳಲಾಗಿದೆ. ಈ ಅಧ್ಯಯನದ ಪ್ರಕಾರ, ವಿದ್ಯುತ್ಕಾಂತೀಯ ವಿಕಿರಣವನ್ನು ಹೊರಸೂಸುವ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ ಮತ್ತು ವೀರ್ಯದ ಕೊರತೆಯು ಪುರುಷರಲ್ಲಿ ತಂದೆಯಾಗುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಅಧ್ಯಯನ ಹೇಳಿದ್ದೇನು?
ತಜ್ಞರ ಪ್ರಕಾರ, ಕಳೆದ 50 ವರ್ಷಗಳಲ್ಲಿ ಪುರುಷರ ವೀರ್ಯ ಗುಣಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಇದಕ್ಕೆ ಪರಿಸರ ಮತ್ತು ಜನರ ಜೀವನಶೈಲಿಗೆ ಸಂಬಂಧಿಸಿದ ಹಲವಾರು ಕಾರಣಗಳಿವೆ ಎನ್ನಲಾಗಿದೆ. ಆದಾಗ್ಯೂ, ಮೊಬೈಲ್ ಫೋನ್‌ಗಳ ಪ್ರಭಾವವನ್ನು ಇನ್ನೂ ಪರಿಗಣಿಸಲಾಗಿಲ್ಲ. ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸುಮಾರು 13 ವರ್ಷಗಳ ಅವಧಿಯಲ್ಲಿ (2005 ಮತ್ತು 2018 ರ ಅವಧಿಯಲ್ಲಿ ) ಚಿಕಿತ್ಸೆಗಾಗಿ ಬಂದ 18 ರಿಂದ 22 ವರ್ಷ ವಯಸ್ಸಿನ 2,886 ಸ್ವಿಸ್ ಪುರುಷರ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ. ಈ ದತ್ತಾಂಶ ಆಧರಿಸಿದ ಅಧ್ಯಯನವು ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ, ಕಡಿಮೆ ಸ್ಪರ್ಮ್ ಕೌಂಟ್ ಮತ್ತು ದುರ್ಬಲ ವೀರ್ಯದ ಚಲನಶೀಲತೆಯಂತಹ ಸಮಸ್ಯೆಗಳ ನಡುವಿನ ಸಂಬಂಧವನ್ನು ಪತ್ತೆಹಚ್ಚಿದೆ.

ಹೆಚ್ಚು ಫೋನ್ ಬಳಸುವ ಪುರುಷರಿಗಿಂತ ಕಡಿಮೆ ಮೊಬೈಲ್ ಫೋನ್ ಬಳಸುವ ಪುರುಷರು ಉತ್ತಮ ವೀರ್ಯ ಗುಣಮಟ್ಟವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ವೀರ್ಯದ ಗುಣಮಟ್ಟವನ್ನು ಅದರ ಸಾಂದ್ರತೆ, ವೀರ್ಯ ಎಣಿಕೆ, ವೀರ್ಯ ಚಲನಶೀಲತೆ ಮತ್ತು ಅವುಗಳ ರಚನೆಯಂತಹ ನಿಯತಾಂಕಗಳ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಪುರುಷರ ವೀರ್ಯಾಣು ಗುಣಮಟ್ಟ ವೇಗವಾಗಿ ಕುಸಿಯುತ್ತಿದೆ
ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿದ ಮೌಲ್ಯಗಳ ಆಧಾರದ ಮೇಲೆ, ಪುರುಷರ ವೀರ್ಯ ಸಾಂದ್ರತೆಯು 15 ಮಿಲಿಯನ್ / ಮಿಲಿಗಿಂತ ಕಡಿಮೆಯಿದ್ದರೆ, ಗರ್ಭಧಾರಣೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇದೇ ವೇಳೆ, ವೀರ್ಯದ ಸಾಂದ್ರತೆಯು 40 ಮಿಲಿಯನ್ / ಮಿಲಿಗಿಂತ ಕಡಿಮೆಯಿದ್ದರೆ ಅದು ದುರ್ಬಲತೆಗೆ ಕಾರಣವಾಗಬಹುದು ಎಂದೂ ಕೂಡ ಹೇಳಲಾಗಿದೆ. ಕಳೆದ 5 ದಶಕಗಳಲ್ಲಿ ಪುರುಷರಲ್ಲಿ ವೀರ್ಯಾಣು ಗುಣಮಟ್ಟದಲ್ಲಿ ತ್ವರಿತ ಕುಸಿತ ಕಂಡುಬಂದಿದೆ ಎಂದು ಇತರ ಕೆಲ ಅಧ್ಯಯನಗಳು ತೋರಿಸಿವೆ ಎಂಬುದು ಇಲ್ಲಿ ಗಮನಾರ್ಹ.

Leave a Reply

error: Content is protected !!