ಪ್ರೀತಿಗೆ ವಿರೋಧ; ಓಡಿಹೋಗಿ ಮದುವೆಯಾದ ಮೂರೇ ದಿನಕ್ಕೆ ನವದಂಪತಿ ಹತ್ಯೆ

ಶೇರ್ ಮಾಡಿ

ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮಾರಿ ಸೆಲ್ವಂ(24), ಕಾರ್ತಿಕಾ(20) ಹತ್ಯೆಯಾದ ದಂಪತಿ.

ಮಾರಿ ಸೆಲ್ವಂ ಹಾಗೂ ಕಾರ್ತಿಕಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎರಡೂ ಮನೆಯವರ ವಿರೋಧ ಇತ್ತು. ಮನೆಯವರ ವಿರೋಧದ ನಡುವೆಯೂ ಅ.31 ರಂದು ಸೆಲ್ವಂ ಹಾಗೂ ಕಾರ್ತಿಕಾ ಅವರು ಓಡಿಹೋಗಿ ಮದುವೆಯಾಗಿದ್ದರು. ಮದುವೆಯ ಬಳಿಕ ನವದಂಪತಿ ಮುರುಗೇಶನ್ ನಗರದಲ್ಲಿ ವಾಸಿಸುತ್ತಿದ್ದರು.

ಮದುವೆಯಾಗಿ ಮೂರು ದಿನಗಳು ಕಳೆದಿದೆ. ಗುರುವಾರ(ನ.2 ರಂದು) ಸಂಜೆ 6 ಮಂದಿಯ ಗುಂಪೊಂದು ಬೈಕ್‌ನಲ್ಲಿ ಬಂದು ದಂಪತಿಯಿದ್ದ ಮನೆಗೆ ನುಗ್ಗಿ ಹಲ್ಲೆಗೈದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಾಜಿ ಹಾಗೂ ಗ್ರಾಮಾಂತರ ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

error: Content is protected !!
%d