ಪ್ರಿಯತಮೆ ಭೇಟಿ ವೇಳೆ ಸಿಕ್ಕಿಬಿದ್ದ; ಮನೆಯವರ ಕಣ್ತಪ್ಪಿಸಲು ಕೂಲರ್‌ಯೊಳಗೆ ಅವಿತ.!

ಶೇರ್ ಮಾಡಿ

ಪ್ರಿಯಕರನೊಬ್ಬ ರಹಸ್ಯವಾಗಿ ಪ್ರಿಯತಮೆಯ ಮನೆಗೆ ಭೇಟಿ ನೀಡಲು ಹೋದ ಸಂದರ್ಭದಲ್ಲಿ ಮನೆಯವರ ಕೈಗೆ ಸಿಕ್ಕಿಬಿದ್ದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್‌ ಟಾಪಿಕ್‌ ಆಗಿದೆ.

ಯುವಕನೊಬ್ಬ ರಾತ್ರಿಯ ವೇಳೆ ಯುವತಿಯ ಮನೆಗೆ ಭೇಟಿಗೆಂದು ಬಂದಿದ್ದಾನೆ. ಮನೆಯವರಿಗೆ ಗೊತ್ತಾಗದಾಗೆ ರಹಸ್ಯವಾಗಿ ಯುವಕ ತನ್ನ ಪ್ರಿಯತಮೆಯೊಂದಿಗೆ ಮಾತನಾಡುತ್ತಿದ್ದ. ಆದರೆ ಇದೇ ವೇಳೆ ಯುವತಿಯ ಮನೆಯವರು ಕೋಣೆಯೊಳಗೆ ಬಂದಿದ್ದಾರೆ. ಈ ಇಕ್ಕಟ್ಟಿನ ಸ್ಥಿತಿಯಲ್ಲಿ ಯುವಕನಿಗೆ ಏನು ಮಾಡೋದೆಂದು ಗೊತ್ತಾಗದೆ, ಕೂಡಲೇ ಕೋಣೆಯಲ್ಲಿದ್ದ ಕೂಲರ್‌ ನೊಳಗೆ ನುಸುಳಿ ಕೂತಿದ್ದಾನೆ.ಕೂಲರ್‌ ನ ಹಿಂದಿನ ಪಾರ್ಟ್‌ನ್ನು ತೆಗೆದು ಅದರೊಳಗೆ ಅವಿತುಕೊಂಡು ಕೂತಿದ್ದಾನೆ. ಇತ್ತ ಯುವತಿಯ ಮನೆಯವರು ಅತ್ತಿತ್ತ ಹುಡುಕಿ ಕೊನೆಗೆ ಕೂಲರ್‌ ನ್ನು ಸರಿದು ನೋಡಿದ ವೇಳೆ ಅದರೊಳಗೆ ಯುವಕ ಇರುವುದನ್ನು ನೋಡಿದ್ದಾರೆ. ಈ ಘಟನೆ ಮೊಬೈಲ್‌ ನಲ್ಲಿ ಸೆರೆಯಾಗಿದೆ. ಇಲ್ಲಿಗೆಯೇ ವಿಡಿಯೋ ಮುಕ್ತಾಯವಾಗಿದ್ದು, ಮುಂದೇನಾಯಿತೆಂದು ತಿಳಿದಿಲ್ಲ.

ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್‌ ಮಾಡಿದ್ದಾರೆ. “ಆತ ಕೂಲರ್‌ ನಲ್ಲಿ ಹೇಗೆ ಫಿಟ್‌ ಆದ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ “ಸಿಕ್ಕಿ ಬಿದ್ದ ಪಾಪ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

Leave a Reply

error: Content is protected !!
%d