ದಂಡುಪಾಳ್ಯ ಸಿನಿಮಾ ರೀತಿಯಲ್ಲಿ ಅಧಿಕಾರಿ ಪ್ರತಿಮಾ ಹತ್ಯೆ: ಸ್ಫೋಟಕ ಅಂಶ ಬೆಳಕಿಗೆ

ಶೇರ್ ಮಾಡಿ

ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣದ ಹಿಂದೆ ಕಲ್ಲು ಕ್ವಾರಿ ಮಾಫಿಯಾ ಅನುಮಾನಗಳು ವ್ಯಕ್ತವಾಗಿವೆ. ಪ್ರತಿಮಾರನ್ನು ಇಬ್ಬರು ದುಷ್ಕರ್ಮಿಗಳು ದಂಡುಪಾಳ್ಯ ಸಿನಿಮಾ ಮಾದರಿಯಲ್ಲಿ ಕೊಲೆಗೈದಿದ್ದಾರೆ. ಹೌದು.. ಮೊದಲು ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ ಕುತ್ತಿಗೆ ಸೀಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ. ಇನ್ನು ಮರಣೋತ್ತರ ಪರೀಕ್ಷೆ ವೇಳೆ ಪ್ರತಿಮಾ ಕುತ್ತಿಗೆಯಲ್ಲಿ ಹಗ್ಗ ಬಿಗಿದಿರುವ ಗುರುತು ಪತ್ತೆಯಾಗಿದೆ.

ದಂಡುಪಾಳ್ಯ ಸಿನಿಮಾ ರೀತಿಯಲ್ಲಿ ಹತ್ಯೆ
ಶನಿವಾರ (ನವೆಂಬರ್ 04) ಸಂಜೆ ಸಂಜೆ 7:45ಕ್ಕೆ ಪ್ರತಿಮಾ ಅವರನ್ನು ಕಾರು ಚಾಲಕ ಮನೆಗೆ ಡ್ರಾಪ್ ಮಾಡಿ ಬಳಿಕ ಅಲ್ಲಿಂದ ಚಾಲಕ ತಮ್ಮ ಮನೆಗೆ ತೆರಳಿದ್ದ. ಕಾರಿನ ಚಾಲಕ ಮನೆಯ ಕಡೆಗೆ ಹೋದ ನಂತರ ಮೊದಲನೆ ಮಹಡಿಯಲ್ಲಿದ್ದ ತಮ್ಮ ಮನೆಗೆ ತೆರಳಿದ ಪ್ರತಿಮಾ ಅವರು ಬಾಗಿಲೆಗೆ ಹಾಕಿದ್ದ ಬೀಗವನ್ನು ತೆಗೆದಿದ್ದಾರೆ. ಮನೆಯ ಭದ್ರತೆಗಾಗಿ ಮುಖ್ಯ ಬಾಗಿಲ ಜೊತೆಗೆ ಅದರ ಮುಂಭಾಗ ಕಬ್ಬಿಣದ ಬಾಗಿಲನ್ನೂ ಅಳವಡಿಕೆ ಮಾಡಲಾಗಿತ್ತು. ಹೀಗಾಗಿ, ಕಬ್ಬಿಣದ ಬಾಗಿಲು ತೆರೆದು, ನಂತರ ಮುಖ್ಯ ಬಾಗಿಲನ್ನು ತೆರೆದು ಮನೆಯೊಳಗೆ ಕಾಲಿಟ್ಟಿದ್ದಾರೆ. ಪ್ರತಿಮಾ ಅವರು ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಹಿಂದಿನಿಂದ ಬಂದ ಹಂತಕರು ಕೂಡಲೇ ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದಿದ್ದಾನೆ. ಅಲ್ಲದೇ ಮತ್ತೋರ್ವ ಚೀರಾಡಲು ಆಗದಂತೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ.

ನಂತರ ಪ್ರತಿಮಾರನ್ನು ಮನೆಯೊಳಗೆ ಎಳೆದೊಯ್ದು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಹಂತಕರು ದಂಡುಪಾಳ್ಯ ಸಿನಿಮಾ ಮಾದರಿಯಲ್ಲಿ ಪ್ರತಿಮಾರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾರೆ. ಇನ್ನು ಪ್ರತಿಮಾ ಅವರು ಕಚೇರಿಗೆ ತೆಗೆದುಕೊಂಡು ಹೋಗಿ ವಾಪಸ್‌ ಬಂದಿದ್ದ ಊಟದ ಬ್ಯಾಗ್‌ ಹಾಗೂ ಅವರ ಚಸ್ಮಾ ಕೂಡ ಬಾಗಿಲ ಬಳಿಯೇ ಬಿದ್ದಿತ್ತು ಎನ್ನುವುದು ತಿಳಿದುಬಂದಿದೆ.

ತನಿಖೆ ಚುರುಕುಗೊಳಿಸಿದ ಪೊಲೀಸರು
ಇನ್ನು ಈ ಪ್ರಕರಣವನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಪೊಲೀಸರು ಕೊಲೆಯಾದ ಪ್ರತಿಮಾ ಅವರ ಐಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ, ಮೊಬೈಲ್ ಲಾಕ್ ಆಗಿದ್ದು, ಅದನ್ನು ಅನ್​ಲಾಕ್​ ಹಾಗೂ ರಿಟ್ರೀವ್​ಗೆ ಕಳಿಸಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ. ಫೋನ್ ಅನ್​ಲಾಕ್​ ಬಳಿಕ ಕೊನೆಯದಾಗಿ ಬಂದ ಕರೆಗಳು, ಮೆಸೇಜ್​ ಹಾಗೂ ವಾಟ್ಸಾಪ್​ ಚಾಟಿಂಗ್ ಸೇರಿದಂತೆ ಹಲವು ಮಾದರಿಯಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಲಿದ್ದಾರೆ.

ನಿನ್ನೆ ಎಷ್ಟು ಕರೆ ಬಂದಿದ್ವು, ಯಾರು ಕರೆ ಮಾಡಿದ್ದರು? ಯಾವ ನಂಬರ್​ನಿಮದ ಹೆಚ್ಚು ಕರೆಬಂದಿತ್ತು? ಪ್ರತಿಮಾ ಅವರು ಕೊನೆಯದಾಗಿ ಯಾವ ಯಾವ ಕೇಸ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು? ಅವರು ಇತ್ತಿಚೀಗೆ ಎಲ್ಲಿ ರೇಡ್ ಮಾಡಿದ್ರು.? ಹೀಗೆ ಅವರ ಬಳಿ ಇದ್ದ ಎಲ್ಲಾ ಕೇಸ್ ಫೈಲ್ ಗಳ ಪೊಲೀಸರು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಹಾಗೇ ಕಾರಿನ ಚಾಲಕನನ್ನು ಸಹ ವಿಚಾರಣೆಗೊಳಪಡಿಸಲಿದ್ದಾರೆ.

Leave a Reply

error: Content is protected !!