ಬರಹ ಬದುಕು ಆಗಬೆಕು. ಅದು ವ್ಯಕ್ತಿಯ ವ್ಯಕ್ತಿತ್ವವನ್ನು ಘನತೆಯನ್ನು ಹೆಚ್ಚಿಸುತ್ತದೆ. ಅದರಿಂದ ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಸನ್ಮಾರ್ಗ ದೊರಕುತ್ತದೆ. ಎಂದು ವಿದ್ವಾಂಸರಾದ ವೇದಮೂರ್ತಿ ಶ್ರೀವತ್ಸ ಕೆದಿಲಾಯರು ಅಶೀರ್ವಚನ ನೀಡಿದರು.
ಅವರು ಪುತ್ತೂರು ಬಲ್ನಾಡಿನ ನೆಲ್ಲಿತ್ತಾಯ ತರವಾಡು ಮನೆಯಲ್ಲಿ ಜರಗಿದ ಶ್ರೀಮತಿ ಕೊಡಂಕಿರಿ ಅಪರ್ಣಾರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಅಶೀರ್ವಚನ ನೀಡಿದ್ದರು.
ಶ್ರೀಮತಿ ಕೊಡಂಕಿರಿ ಅಪರ್ಣಾ ನೆಲ್ಲಿತ್ತಾಯರು ಭರತ ನಾಟ್ಯ ಕಲಾವಿದರೂ ಮತ್ತು ಹಿರಿಯ ಬರಹಗಾರರು ಆಗಿರುತ್ತಾರೆ. ಇತೀಚೆಗೆ ಭಗವದ್ಗೀತೆ 18 ಅದ್ಯಾಯ ಮತ್ತು 700 ಶ್ಲೊಕವನ್ನು ತುಳುಲಿಪಿಗೆ ವರ್ಗಾವಣೆ ಮಾಡಿ ಉತ್ತಮ ತುಳುಲಿಪಿ ಭಗವದ್ಗೀತೆ ರಚನೆ ಮಾಡಿದ್ದರು. ಅದಕ್ಕಾಗಿ ಅವರನ್ನು ಈ ದಿನ ಪುತ್ತೂರಿನ ನೆಲ್ಲಿತ್ತಾಯ ತರವಾಡು ಮನೆಯಲ್ಲಿ ಹಿರಿಯರು, ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಶ್ರೀಅಪರ್ಣಾ ದೀಪಕ್ ನೆಲ್ಲಿತ್ತಾಯರನ್ನೂ ಅಭಿನಂದನೆ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ಅವರು ನನ್ನ ಈ ಎಲ್ಲಾ ಪ್ರಯತ್ನ ಭಗವಂತನಿಗೆ ಅರ್ಪಣೆ ಎಂದರು.
ಶಶಾಂಕ ನೆಲ್ಲಿತ್ತಾಯರು ಸನ್ಮಾನಿತರ ಪರಿಚಯ ಮಾಡಿದ್ದರು.
ಕಾರ್ಯಕ್ರಮದಲ್ಲಿ ರಮಾನಂದ ನೆಲ್ಲಿತ್ತಾಯ, ಮೊಹನ ನೆಲ್ಲಿತ್ತಾಯ, ಜಯರಾಮ ನೆಲ್ಲಿತ್ತಾಯ, ನೆಲ್ಲಿತ್ತಾಯ ಕುಟುಂಬದ ಹಿರಿಯರು, ಮಾತೆಯರು, ಗಣ್ಯರು ಭಾಗವಹಿಸಿದ್ದರು