
ಭಾರತದ ಅನೇಕ ಭಾಗಗಳಲ್ಲಿ ಬಾಳೆ ಎಲೆಗಳನ್ನು ಅಡುಗೆ ಮಾಡಲು ಮತ್ತು ಆಹಾರವನ್ನು ಬಡಿಸಲು ಬಳಸಲಾಗುತ್ತದೆ. ವಿಶೇಷವಾಗಿ ದಕ್ಷಿಣ ಭಾರತ ಅಥವಾ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಬಳಕೆ ಮಾಡಲಾಗುತ್ತದೆ.ಈ ಸಾಂಪ್ರದಾಯಿಕ ವಿಧಾನವನ್ನು ಶತಮಾನಗಳಿಂದ ಅಳವಡಿಸಲಾಗಿದ್ದಾದರೂ ಅವುಗಳನ್ನೇ ಏಕೆ ಬಳಕೆ ಮಾಡುತ್ತೇವೆ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹೀಗಾಗಿ ಇದರ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆಗುವ ಪ್ರಯೋಜನಗಳು:
- ಪೌಷ್ಟಿಕಾಂಶದ ಮೌಲ್ಯ:
ಬಾಳೆ ಎಲೆಗಳು ಪಾಲಿಫಿನಾಲ್ಸ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀಗಾಗಿ ಬಾಳೆ ಎಲೆಯ ಮೇಲೆ ಆಹಾರವನ್ನು ಇರಿಸಿದಾಗ, ಈ ಕೆಲವು ಪೋಷಕಾಂಶಗಳು ಆಹಾರಕ್ಕೆ ಸೇರಿಕೊಂಡು ಪೌಷ್ಟಿಕಾಂಶದ ಮೂಲಕ ನಮ್ಮ ದೇಹವನ್ನು ಸೇರುತ್ತವೆ. - ರುಚಿ ಹೆಚ್ಚಳ:
ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಎಲೆಗಳು ಆಹಾರಕ್ಕೆ ಸೌಮ್ಯವಾದ, ಮಣ್ಣಿನ ಪರಿಮಳವನ್ನು ನೀಡುತ್ತವೆ - ನೋಡಲು ಆಕರ್ಷಕ:
ಬಾಳೆ ಎಲೆಗಳ ಮೇಲೆ ಆಹಾರವನ್ನು ತಿನ್ನುವುದು ಆಹಾರಕ್ಕೆ ಸಾಂಪ್ರದಾಯಿಕ ಆಕರ್ಷಣೆಯನ್ನು ನೀಡುತ್ತದೆ. ಇದು ಸಂಪ್ರದಾಯವಾಗಿದ್ದರೂ ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. - ವಿಷಕಾರಿಯಲ್ಲದ ಆಯ್ಕೆ:
ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್ ಪ್ಲೇಟ್’ಗಳಿಗೆ ಹೋಲಿಸಿದರೆ ಬಾಳೆ ಎಲೆಗಳು ವಿಷಕಾರಿಯಲ್ಲ, ಇದರಿಂದಾಗಿ ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಕಂಡುಬರುವುದಿಲ್ಲ. ಇದು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. - ಜೀರ್ಣಕ್ರಿಯೆ ಸುಧಾರಣೆ:
ಬಾಳೆ ಎಲೆಗಳಲ್ಲಿ ಬಡಿಸಿದ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿ ಕಂಡುಬರುವ ಪಾಲಿಫಿನಾಲ್’ಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ - ನೈಸರ್ಗಿಕ ಸೋಂಕು ನಿವಾರಕ:
ಬಾಳೆ ಎಲೆಗಳು ನೈಸರ್ಗಿಕ ಆಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. - ಪರಿಸರ ಸ್ನೇಹಿ:
ಪರಿಸರ ಮಾಲಿನ್ಯ ಮಾಡುವ ಪ್ಲೇಟ್’ಗಳಿಗಿಂತ ಇದು ನೈಸರ್ಗಿಕವಾದ ಉತ್ತಮ ಆಯ್ಕೆ. ಪ್ಲಾಸ್ಟಿಕ್ ಅಥವಾ ಫೋಮ್ ಪ್ಲೇಟ್‌ಗಳಿಂದ ಉಂಟಾಗುವ ಭೂ ಮಾಲಿನ್ಯವನ್ನು ಇದು ಕಡಿಮೆ ಮಾಡುತ್ತದೆ.

