ಧರ್ಮಸ್ಥಳ ಪೊಲೀಸರಿಂದ ಸಾರ್ವಜನಿಕ ಜಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಶೇರ್ ಮಾಡಿ

ನಿಡ್ಲೆ ಗ್ರಾಮದ ಕುದ್ರಾಯ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುತ್ತಿದ್ದ ಆರೋಪಿಗಳಾದ ಕಳೆಂಜ ಗ್ರಾಮದ ನಿವಾಸಿಗಳಾದ ಸದಾನಂದ (25), ದಯಾನಂದ (28) ಮತ್ತು ಅನೀಶ್‌ ಕುಮಾರ್‌ (32) ಅವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ಆರೋಪಿಗಳಿಂದ ಮದ್ಯ ತುಂಬಿದ 2 ಸಾಚೆಟ್‌ಗಳನ್ನು ಹಾಗೂ ಮದ್ಯ ಸೇವಿಸಲು ಬಳಸಿದ ಸ್ಟೀಲ್‌ ಲೋಟಗಳನ್ನು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಅಬಕಾರಿ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ.

Leave a Reply

error: Content is protected !!