ರಸ್ತೆ ಗುಂಡಿಗೆ ಬೈಕ್‌ ಸಮೇತ ಬಿದ್ದ ಸವಾರ

ಶೇರ್ ಮಾಡಿ

ಮಂಗಳೂರು ನಗರದ ವೆಲೆನ್ಸಿಯ ಬಳಿ ಕಾಮಗಾರಿ ಉದ್ದೇಶಕ್ಕೆ ಕಾಂಕ್ರಿಟ್‌ ರಸ್ತೆಯಲ್ಲಿ ತೋಡಿದ್ದ ಗುಂಡಿಗೆ ಬೈಕ್‌ ಸಮೇತ ಸವಾರ ಬಿದ್ದು ಗಾಯಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.

ವೆಲೆನ್ಸಿಯದಿಂದ ನಂದಿಗುಡ್ಡೆಗೆ ಬರುವ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರಿಟ್‌ ರಸ್ತೆಯಲ್ಲಿ ಬೃಹತ್‌ ಗುಂಡಿ ತೆಗೆಯಲಾಗಿದೆ. ಇಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಇರುವ ಕಾರಣ ಬೈಕ್‌ ಸವಾರ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಮಳೆಯೂ ಸುರಿಯುತ್ತಿತ್ತು. ತತ್‌ಕ್ಷಣ ಸ್ಥಳೀಯರು ಸವಾರನನ್ನು ಗುಂಡಿಯಿಂದ ಹೊರತೆಗೆದು ಉಪಚರಿಸಿದರು. ಈ ಗುಂಡಿ ರಸ್ತೆಯ ಮಧ್ಯ ಭಾಗದಲ್ಲಿದ್ದು, ಸುತ್ತ ಯಾವುದೇ ಬ್ಯಾರಿಕೇಡ್‌ ಅಳವಡಿಸಿಲ್ಲ. ಸ್ಥಳೀಯರು ತತ್‌ಕ್ಷಣ ಪಾಲಿಕೆ ಮೇಯರ್‌ ಅವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.

Leave a Reply

error: Content is protected !!
%d