ಕಾಲು ಹಿಡಿದುಕೊಳ್ಳಲು ಬಂದವನೇ ಪ್ರತಿಮಾ ಪ್ರಾಣ ತೆಗೆದ.!

ಶೇರ್ ಮಾಡಿ

ಬೆಂಗಳೂರಿನಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪ್ರತಿಮಾ ಅವರ ಮಾಜಿ ಕಾರು ಚಾಲಕ ಕಿರಣ್ ಎನ್ನುವಾತನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಕೆಲ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಕೆಲಸದಿಂದ ತೆಗೆಯಬೇಡಿ ಎಂದು ಮನೆಗೆ ಬಂದು ಕಾಲು ಹಿಡಿದಿದ್ದ ಕಿರಣ್​, ಬಳಿಕ ಪ್ರತಿಮಾರನ್ನು ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಎನ್ನುವ ಅಂಶ ಬಹಿರಂಗವಾಗಿದೆ.

ಕಾಲು ಹಿಡಿಯಲು ಬಂದು ಪ್ರಾಣ ತೆಗೆದ
ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡಿದ್ದ ಕಿರಣ್​, ಶನಿವಾರ (ಪ್ರತಿಮಾ ಕೊಲೆಯಾದ ದಿನ ನ.6) ಪ್ರತಿಮಾ ಅವರ ಮನೆಗೆ ತೆರಳಿದ್ದ ಕಿರಣ್, ತಪ್ಪಾಗಿದೆ ಕೆಲಸದಿಂದ ತೆಗೆಯಬೇಡಿ ಎಂದು ಕೇಳಿಕೊಂಡಿದ್ದಾನೆ. ಅಲ್ಲದೇ ಪ್ರತಿಮಾರ ಕಾಲಿಗೆ ಬಿದ್ದು ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ಆದರೂ ಸಹ ಪ್ರತಿಮಾ ಒಪ್ಪಿರಲಿಲ್ಲ. ಇದರಿಂದ ಮತ್ತಷ್ಟು ಕಿರಣ್​ನ ಕೋಪ ಮತ್ತಷ್ಟು ನೆತ್ತಿಗೇರಿದ್ದು, ವೈರ್ ಮಾದರಿಯ ವಸ್ತುದಿಂದ ಪ್ರತಿಮಾ ಕುತ್ತಿಗೆಗೆ ಬಿಗಿದಿದ್ದಾನೆ. ಬಳಿಕ ಪ್ರತಿಮಾ ನೆಲಕ್ಕೆ ಬಿದ್ದ ಮೇಲೆ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಈ ಕೃತ್ಯ ಎಸಗಿದ ನಂತರ ಚಾಮರಾಜನಗರದತ್ತ ಪರಾರಿಯಾದ್ದ. ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಕಿರಣ್​ನ ಫೋನ್ ಸಿಗ್ನಲ್ ಆಧರಿಸಿ ಕೊನೆಗೆ ಮಹದೇಶ್ವರಬೆಟ್ಟದಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಿರಣ್​ನನ್ನು ಕೆಲಸದಿಂದ ತೆಗೆದಿದ್ಯಾಕೆ?
ಮೊಬೈಲ್ ಲೋಕೆಷನ್ ಆಧರಿಸಿ ಕೊಲೆ ಆರೋಪಿ ಕಿರಣ್​ನ್ನು ಸುಬ್ರಮಣ್ಯ ಪುರ ಪೊಲೀಸರು, ಮಹದೇಶ್ವರಬೆಟ್ಟದಲ್ಲಿ ಹಿಡಿದು ಸದ್ಯ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಕಳೆದ ಐದು ವರ್ಷಗಳಿಂದ ಕಿರಣ್ ಕಾಂಟ್ರಾಕ್ಟ್ ಬೇಸಸ್ ಮೇಲೆ ಬೆಂಗಳೂರಿನ ಗಣಿ-ಭೂವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ.ಆದ್ರೆ, ಹಲವು ವರ್ಷಗಳಿಂದ ಇಲಾಖೆಯ ಕಾರು ಚಾಲಕನಾಗಿದ್ದ ಕಿರಣ್​ ನನ್ನು ಪ್ರತಿಮಾ ಅವರೇ ಕೆಲಸದಿಂದ ತೆಗೆದು ಹಾಕಿದ್ದರು. ಯಾಕಂದರೆ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ರೇಡ್​ ಹೋಗುವ ಮಾಹಿತಿಯನ್ನು ಲೀಕ್ ಮಾಡುತ್ತಿದ್ದ. ಈ ಕಾರಣಕ್ಕೆ ಪ್ರತಿಮಾ ಅವರು ಕಿರಣ್​ಗೆ ಎಚ್ಚರಿಕೆ ನೀಡಿದ್ದರು. ಹಾಗೇ ಕೆಲ ದಿನಗಳ ಹಿಂದೆ ಒಂದು ಅಕ್ಸಿಡೆಂಟ್ ಮಾಡಿದ್ದ. ಈ ಕಾರಣಕ್ಕೆ ಪ್ರತಿಮಾ ಅವರು ಕಾರು ಚಾಲಕ ಕಿರಣ್​ನನ್ನು 10 ದಿನಗಳ ಹಿಂದೆ ಅಷ್ಟೇ ಕೆಲಸದಿಂದ ತೆಗೆದು ಹಾಕಿದ್ದರು. ಈ ಕೋಪದಿಂದಲೇ ಕಿರಣ್​ ಪ್ರತಿಮಾರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದೇನು
ಬೆಂಗಳೂರು, (ನವೆಂಬರ್ 06): ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ತನಿಖೆ ದಕ್ಷಿಣ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಡೆಯುತ್ತಿದ್ದು, ಈಗ ಓರ್ವ ಆರೋಪಿ ಕಿರಣ್​ ಎನ್ನುವಾತನ್ನು ವಶಕ್ಕೆ ಪಡೆಯಲಾಗಿದೆ. ಮಹದೇಶ್ವರಬೆಟ್ಟದಲ್ಲಿ ಕಿರಣ್​ನನ್ನು ವಶಕ್ಕೆ ಪಡೆಯಲಾಗಿದೆ.ಈ ಕಿರಣ್ ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದ್ರೆ, 10 ದಿನದ ಹಿಂದೆ ಕಿರಣ್​​ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಸದ್ಯಕ್ಕೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಮಾಹಿತಿ ನೀಡಿದರು.

Leave a Reply

error: Content is protected !!