ಬಿಗ್ ಬಾಸ್ ಕನ್ನಡ ಸೀಸನ್ 10 ರ ನಾಲ್ಕನೇ ವಾರದಲ್ಲಿ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಮನೆಯಿಂದ ಹೊರ ನಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿ ಅಪಾರ ಅಭಿಮಾನಿ ಬಳಗವಿದ್ದರೂ ರಕ್ಷಕ್ ಇಷ್ಟು ಬೇಗ ಎಲಿಮಿನೇಟ್ ಆಗಲು ಕೆಲವು ಕಾರಣಗಳಿವೆ ಎನ್ನಲಾಗುತ್ತಿದೆ.
ಹೊರಗಡೆ ಇದ್ದಷ್ಟು ಜೋಶ್‌ನಲ್ಲಿ ರಕ್ಷಕ್ ಬುಲೆಟ್ ಕಾಣಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ರಕ್ಷಕ್ ಅವರಿಂದ ಜನ ಬೇರೆಯದ್ದೇನನ್ನೋ ಬಯಸುತ್ತಿದ್ದರು. ಆದರೆ ರಕ್ಷಕ್ ಬುಲೆಟ್ ಸೇಫ್ ಆಡಲು ಹೋಗಿ ಎಡವಟ್ಟು ಮಾಡಿಕೊಂಡರು. ಮತ್ತೊಂದೆಡೆ ಗುಂಪುಗಾರಿಕೆಗೆ ಬಲಿಯಾದರು. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಣ್ಣಿಗೆ ಕಾಣುವಂತೆ ಗ್ರೂಪಿಸಮ್ ನಡೀತಿದೆ. ರಕ್ಷಕ್ ಸಹ ಒಂದೇ ಗುಂಪಿಗೆ ಸೀಮಿತರಾದವರಂತೆ ಕಂಡರು. ಅಲ್ಲದೇ, ಡ್ರೋನ್ ಪ್ರತಾಪ್ ಬಗ್ಗೆ ಆಡಿದ ಕೆಲವು ಮಾತುಗಳು ರಕ್ಷಕ್ ಅವರಿಗೆ ನೆಗೆಟಿವ್ ಶೇಡ್ ನೀಡಿದವು. ಇದೆಲ್ಲ ರಕ್ಷಕ್ ಅವರಿಗೆ ಮುಳುವಾಗಿದೆ.
ರಕ್ಷಕ್ ಈ ಬಾರಿ ಎಲಿಮಿನೇಟ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕೆಲವರಿಗೆ ಇದು ಬೇಸರ ತಂದಿದ್ದರೆ, ಮತ್ತೆ ಕೆಲವರಿಗೆ ಖುಷಿ ನೀಡಿದೆ. ಅಲ್ಲದೇ, ಡ್ರೋನ್ ಪ್ರತಾಪ್ ಕಂಡರೆ ರಕ್ಷಕ್ ಉರಿದು ಬೀಳುತ್ತಿದ್ದರು. ಅವರಿಗೆ ಹೊಡೆಯುವ ಆಲೋಚನೆಯಲ್ಲೂ ರಕ್ಷಕ್ ಇದ್ದರು ಎಂಬುದಕ್ಕೆ ಅವರು ಆಡಿದ ಮಾತುಗಳೇ ಸಾಕ್ಷಿ.