ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ

ಶೇರ್ ಮಾಡಿ

ಮುಸ್ಲಿಂ ಯುವಕನೋರ್ವ ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೃತ್ಯವೆಸಗಿದ್ದ ಕಿಡಿಗೇಡಿ ಯುವಕನನ್ನು ಅರಾ ಶೇಕ್ ಎಂದು ಗುರುತಿಸಲಾಗಿದೆ. ಮುರ್ಷಿದಾಬಾದ್‌ನ ಕಂದರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಪೊಲೀಸರು ಕೂಡ ಕೃತ್ಯವೆಸಗಿದ ಯುವಕನನ್ನು ಬಂಧಿಸಿದ್ದು, ಕೃತ್ಯವೆಸಗಿದ ಯುವಕನ್ನು ರತನ್ ಶೇಖ್ ಎಂಬುವವರ ಪುತ್ರ ಅರಾ ಶೇಖ್ ಎಂದು ಗುರುತಿಸಲಾಗಿದೆ.

ತುಂಬಿದ ಸಭೆಯಲ್ಲಿ ಜರ್ಮನ್‌ ಸಚಿವೆಗೆ ಸಚಿವನಿಂದ ಚುಂಬನ: ಸುತ್ತಲಿದ್ದವರೇ ಶಾಕ್‌
ಕಳೆದ ತಿಂಗಳು 31 ರಂದು ಘಟನೆ ನಡೆದಿದ್ದು, ವೀಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ವೀಡಿಯೋದ ಆರಂಭದಲ್ಲಿ ಈ ಯುವಕ ವಾಗ್ವಾದದಲ್ಲಿ ತೊಡಗಿರುವುದು ಕಂಡು ಬಂದಿದೆ. ನಂತರ ಆತ ದೇಗುಲದ ಒಳಗೆ ನುಗ್ಗಿ ಶಿವಲಿಂಗದ ಎದುರು ಮೂತ್ರ ವಿಸರ್ಜನೆ ಮಾಡುವುದನ್ನು ಕಾಣಬಹುದಾಗಿದೆ. ಈ ವೇಳೆ ಅಲ್ಲಿದ್ದ ಕೆಲವರು ಬೊಬ್ಬೆ ಹೊಡೆಯುತ್ತಾ ಅಲ್ಲಿ ಆ ರೀತಿ ಅಸಹ್ಯ ಮಾಡದಂತೆ ತಡೆಯಲು ಪ್ರಯತ್ನಿಸುವುದನ್ನು ಕಾಣಬಹುದು. ಆದರೆ ಆತ ಮಾತ್ರ ಸುಮ್ಮನಿರದೇ ಪ್ಯಾಂಟ್ ಜಿಪ್ ತೆಗೆದು ದೇವಸ್ಥಾನದೊಳಗೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಈ ನಾಚಿಕೆಗೇಡಿನ ಕೃತ್ಯ ಈಗ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಲಾರ್ ಪೊಲೀಸ್ ಠಾಣೆ ಪೊಲೀಸರು ಖಚಿತಪಡಿಸಿದ್ದಾರೆ. ಈ ಕೃತ್ಯವೆಸಗಿದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದ 2017ರಿಂದಲೂ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!