ಮರ ಬಿದ್ದು ಮನೆಗೆ ಹಾನಿ; ಅಪಾಯದಿಂದ ಪಾರಾದ ಮನೆ ಮಂದಿ

ಶೇರ್ ಮಾಡಿ

ಮನೆಯೊಂದಕ್ಕೆ ಮರ ಬಿದ್ದು ಮನೆಗೆ ಸ್ವಲ್ಪ ಮಟ್ಟಿನ ಹಾನಿಯಾಗಿ, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಪುಳಿತ್ತಡಿಯ ಕೋಡಿಯಲ್ಲಿ ಸೋಮವಾರ ನಡೆದಿದೆ.

ಶಿವಪ್ಪ ಗೌಡ ಎಂಬವರ ಮನೆಗೆ ಮರ ಬಿದ್ದಿದ್ದು, ಮನೆಯ ಹಿಂಭಾಗದ ಸಿಮೆಂಟ್ ಶೀಟ್‍ನ ಛಾವಣಿಗೆ ಹಾನಿಯಾಗಿದೆ. ಮರವು ವಿದ್ಯುತ್ ತಂತಿಗಳ ಮೇಲೆಯೂ ಬಿದ್ದಿದ್ದು, ತಂತಿಗಳು ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದವು. ಇದನ್ನು ಕಂಡ ಸ್ಥಳೀಯರಾದ ಸ್ನೇಕ್ ಝಕರಿಯಾ ಅವರು ಮೆಸ್ಕಾಂನವರಿಗೆ ಕರೆ ಮಾಡಿ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿದರು.

ಶಿವಪ್ಪ ಗೌಡ ಅವರ ಮನೆ ಸಮೀಪ ಇರುವ ಜಾಗದಲ್ಲಿ ಬೃಹತ್ ಗಾತ್ರದ ಹಲವು ಅಪಾಯಕಾರಿ ಮರಗಳಿದ್ದು, ಮರ ಬೀಳುವುದು ಶಿವಪ್ಪನವರ ಮನೆಗೆ ಇದು ಮೂರನೇ ಬಾರಿಯಾಗಿದೆ.

Leave a Reply

error: Content is protected !!